ಕ್ವಾರೆಂಟೈನ್‌ನಲ್ಲಿರುವ ಕಾರ್ಮಿಕರಿಗೆ ವಿತರಿಸಿದ ಊಟದಲ್ಲಿ ಹುಳುಗಳು ಪತ್ತೆ..

ದೇವದುರ್ಗ(ರಾಯಚೂರು): ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆ ಮತ್ತು ರಾಜ್ಯಗಳಿಂದ ವಲಸೆ ಹೋದ ಕಾರ್ಮಿಕರನ್ನು ಕರೆತಂದು ದೇವದುರ್ಗ ತಾಲೂಕಿನ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.ಆದರೆ ಈ ಕಾರ್ಮಿಕರಿಗೆ ವಿತರಿಸುವ ಊಟ ಕಳಪೆ ಮಟ್ಟದ್ದಾಗಿದ್ದು,ಸದ್ಯ ಇವರಿಗೆ ನೀಡಲಾದ ಊಟದಲ್ಲಿ ಹುಳುಗಳು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಡಿಗ್ರಿ ಕಾಲೇಜಿನಲ್ಲಿ ಇರಿಸಿರುವ ಕ್ವಾರೆಂಟೈನ್‌ನಲ್ಲಿ ಸುಮಾರು ೧೦೦ ಜನರಿಗೆ ಕಳಪೆ ಆಹಾರ ವಿತರಿಸಲಾಗಿದೆ.ಜೊತೆಗೆ ಕಾರ್ಮಿಕರಿಗೆ ವಿತರಿಸಲು ತಂದಿರುವ ಪ್ಯಾಕೇಟ್‌ನಲ್ಲಿ ಹುಳುಗಳು ಪತ್ತೆಯಾಗಿರುವುದರಿಂದ ಕಾರ್ಮಿಕರು ಊಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ,
ಇನ್ನು ಊಟ ಮಾಡುವ ಪ್ಯಾಕೇಟ್‌ನಲ್ಲಿ ಹುಳುಗಳು ಬಿದ್ದಿರುವ ಬಗ್ಗೆ ವಾರ್ಡನ್‌ಗೆ ಹೇಳಿದರೆ ಹಾರಿಕೆ ಉತ್ತರ ನೀಡಿದ್ದಾರೆ.
ಅಲ್ಲದೆ ಅನಾರೋಗ್ಯದಿಂದ ಬಳಲುತ್ತಿದ್ದವವರಿಗೆ ಔಷಧಿ ವಿವರಿಸುವಲ್ಲಿ ಹಾಗೂ ಮಾಸ್ಕ್, ಸ್ಯಾನೀಟೈಜರ್ ಜೊತೆಗೆ ದಿನಬಳಕೆಯ ವಸ್ತುಗಳಾದ ಸೋಪು,ಫೆಸ್ಟ್ಗಳನ್ನು ಕೂಡ ವಿತರಿಸುವಲ್ಲಿ ಸಹ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಕ್ವಾರಂಟೈನಲ್ಲಿರುವ ಕಾರ್ಮಿಕರು ಆರೋಪಿಸಿದ್ದಾರೆ.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment