ಮಾಡೆಲಿಂಗ್ ಕ್ಷೇತ್ರಕ್ಕೂ ತಟ್ಟಿದ ಕೊರೊನಾ ಬಿಸಿ..

ಹುಬ್ಬಳ್ಳಿ:ವಿಶ್ವದ ಹಲವೆಡೆ ಈಗ ಕೊರೊನಾ ವೈರಸ್ ಭೀತಿ ಆವರಿಸಿದ್ದು,ಇದೇ ಕಾರಣಕ್ಕೆ ಕೊರೊನಾದಿಂದ ದೂರ ಇರಲು ಜನರು ಎಚ್ಚರಿಕೆ ವಹಿಸಿಸುತ್ತಿದ್ದಾರೆ.ಹೀಗಿರುವಾಗ ಕೊರೊನಾ ಬಿಸಿ ಮಾಡಲಿಂಗ್ ಕ್ಷೇತ್ರಕ್ಕೂ ತಟ್ಟಿದ್ದು,ಕೊರೊನಾ ವೈರಸ್ ಕಡಿಮೆ ಆಗುವುದನ್ನೇ ಕಲಾವಿದರು ಕಾಯುತ್ತಿದ್ದಾರೆ.
ಹೌದು,ಕೊರೊನಾ ಸೋಂಕು ಭಾರತಕ್ಕೂ ಹರಡಿದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪ್ರಾಥಮಿಕ ಹಂತದ ಲಾಕ್ ಡೌನ್ ಜಾರಿಯಾದಾಗ ಅಗತ್ಯ ವಸ್ತುಗಳ ಹೊರತು ಪಡಿಸಿ ಬಹುತೇಕ ಎಲ್ಲ ವಹಿವಾಟು ತಿಂಗಳಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತು.
ಪರಿಣಾಮ ಯಾವುದೇ ಮಾಡೆಲಿಂಗ್ ಷೋಗಳಿಲ್ಲದೇ ನಟರು,ಮಾಡೆಲ್ಸ್, ನೃತ್ಯ ಕಲಾವಿದರು, ಕ್ಯಾಮರಾಮನ್‌ಗಳು ಸೇರಿದಂತೆ ಹಲವಾರು ಜನರು ತೊಂದರೆಗೆ ಒಳಗಾಗಿದ್ದಾರೆ.
ಇನ್ನೂ ಕೆಲವು ಜನರಿಗೆ ಕೈಯಲ್ಲಿ ಅವಕಾಶಗಳಿದ್ದರು ಸಹಿತ ಭಾಗವಹಿಸಲು ಸಾಧ್ಯವಾಗದ ಸ್ಥಿತಿಯನ್ನು ಕರೋನಾ ತಂದೊಡ್ಡಿದೆ. ಪರಿಣಾಮ ಮಾಡೆಲಿಂಗ್ ನಲ್ಲಿ ಏನಾದ್ರೂ ಸಾಧನೆಯ ಕನಸು ಕಾಣುತ್ತಿದ್ದ ಪ್ರತಿಭೆಗಳು ಕೊರೋನಾ ಹಾವಳಿಯಿಂದ ತಮ್ಮ ಕನಸುಗಳನ್ನೇ ಅಳಿಸಿ ಹಾಕಿಕೊಳ್ಳುವಂತಾಗಿದ್ದು, ಆದಷ್ಟು ಬೇಗ ಕರೋನಾ ಹಾವಳಿ ಕಡಿಮೆ ಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಕೊರೊನಾ ಬರುವ ಮುನ್ನ ಪ್ರಮಾಥ್ ಸ್ಟಾರ್ ಮಾಡೆಲಿಂಗ್ ಕಂಪನಿಯAತಹ ನೂರಾರು ಕಲಾವಿದರು ಉದ್ಯೋಗ ಜೊತೆಗೆ ಅವಕಾಶ ಕಲ್ಪಿಸಿತ್ತು.ವರ್ಷಗಳ ಪೂರ್ತಿ ಮಾಡೆಲಿಂಗ್ ಕ್ಷೇತ್ರಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು.
ಜೊತೆಗೆ ಎಪ್ರಿಲ್ ಮೇ ತಿಂಗಳಲ್ಲಿ ಹೆಚ್ಚಾಗಿ ಶೋ ಇವೆಂಟ್ ಕಂಪನಿಗಳ ಆಯೋಜನೆ ಮಾಡುತ್ತಿದ್ದರು. ಈಗ ಕೊರೊನಾ ಕಳೆದ ಎರಡು ತಿಂಗಳಿನಿAದ ದೇಶದಲ್ಲಡೆ ಹರಡಿದ ಪರಿಣಾಮ ಮಾಡೆಲಿಂಗ್ ಜಗತ್ತು ತನ್ನ ಇವೆಂಟ್ಸ್ ಕಾರ್ಯಕ್ರಮವನ್ನು ರದ್ದು ಮಾಡಿ ಆನ್‌ಲೈನ್ ಸ್ಪರ್ಧಿಗಳಿಗೆ ಅವಕಾಶ ನೀಡಿದೆ.ಆದರೆ ನೇರವಾಗಿ ಆಯೋಜನೆ ಮಾಡುತ್ತಿದ್ದ ಕಾರ್ಯಕ್ರಮದ ಹಾಗೇ ಆನ್‌ಲೈನ್‌ನಲ್ಲಿ ಸ್ಪರ್ಧೆಗಳು ಹಾಗೂ ಕಲಾವಿದರನ್ನು ಸೆಲೆಕ್ಷನ್ ಮಾಡುವುದು ಕಷ್ಟ ಎಂದು ಪ್ಯಾಷನ್ ಶೋ ನಡೆಸುತ್ತಿದ್ದ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ದೇಶದ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಆದಷ್ಟು ಬೇಗ ಕೊರೊನಾ ಹೊಡೆದೊಡಿಸಲು ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಮನವಿ ಮಾಡುತ್ತಿದ್ದಾರೆ..

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment