ಕೊರೊನಾ ಕಾಟಕ್ಕೆ ಬ್ರೇಕ್ ಹಾಕಲು ಮುಂದಾದ ಸ್ನೇಹಿತರ ಬಳಗ..

ಇಂಡಿ(ವಿಜಯಪುರ): ಕೊರೊನಾ ಕಾಟದಲ್ಲಿ ಬಿಸಿಲು ನಾಡು ವಿಜಯಪುರ ಜಿಲ್ಲೆ ನಲುಗುತ್ತಿದೆ.ಆದರೆ ಇಂತಹ ಸಂದರ್ಭದಲ್ಲಿ ಕೊರೊನಾ ಕಾಟಕ್ಕೆ ಬ್ರೇಕ್ ಹಾಕಲು ಪ್ರಾಣ ಸ್ನೇಹಿತರ ಬಳಗ ಮುಂದಾಗಿದೆ.
ಹೌದು, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪ್ರಾಣ ಸ್ನೇಹಿತರ ಬಳಗವು ತಾಲೂಕು ಸರ್ಕಾರಿ ಆಸ್ಪತ್ರೆ, ಮಿನಿ ವಿಧಾನ ಸೌಧÀ, ಎಸ್‌ಬಿಐ ಬ್ಯಾಂಕ್ ಹಾಗೂ ಇನ್ನಿತರ ಸಾರ್ವಜನಿಕ ದಟ್ಟಣೆ ಇರುವ ಸ್ಥಳಗಳಲ್ಲಿ ೫೦ಕ್ಕೂ ಹೆಚ್ಚು ಸ್ಯಾನಿಟೈಜರ್ ಸ್ಟ್ಯಾಂಡ್ ವಿತರಿಸಿ ಹೃದಯ ವೈಶಾಲಿತೆ ಮೆರೆದಿದೆ.
ಅಲ್ಲದೆ,ಪ್ರತಿ ದಿನವು ಒಂದು ವಿಶೇಷ ಕಾರ್ಯ ಯೋಜನೆ ರೂಪಿಸಿಕೊಳ್ಳುವ ಮೂಲಕ ಜನರಿಗೆ ಮಹಾಮಾರಿ ಕೊರೊನಾದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಇನ್ನು ಕೂಲಿ ಕಾರ್ಮಿಕರು,ನಿರ್ಗತಿಕರು, ಬಡವರು ಹೊತ್ತಿನ ಉಟಕ್ಕೂ ಪಡುವ ಸಂಕಷ್ಟನ್ನು ಕಂಡು ಸುಮಾರು ೫೦೦ ಕ್ಕೂ ಹೆಚ್ಚಿನ ಕಿಟ್ ವಿತರಿಸಿದ್ದಾರೆ.
ಇದೇ ವೇಳೆ ಮುಖ್ಯ ವೈದ್ಯಾಧಿಕಾರಿ ರಮೇಶ ರಾಠೋಡ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಸಂಘ ಸಂಸ್ಥೆಗಳು ವಿಶೇಷವಾಗಿ ಸಹಾಯ ಸಹಕಾರಕ್ಕೆ ಮುಂದಾಗಿವೆ.ಸದ್ಯ ಈ ಕೊರೊನಾ ಚೈನ್ ಬ್ರೇಕ್ ಮಾಡಬೇಕು.ಹಾಗಾಗಿ ಪ್ರತಿಯೊಬ್ಬರೂ ಸರ್ಕಾರ ತಿಳಿಸಿದ ನಿಯಮಗಳನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ರಾಜಶೇಖರ ಕೊಳೆಕರ, ಪುರಸಭೆ ಸದಸ್ಯ ಉಮೇಶ್ ದೆಗಿನಾಳ,ಶಿವು ಬಿಸನಾಳ, ಶಿವು ಮಾಡಿವಾಳ ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗ ಹಾಜರಿದ್ದರು.

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment