ಪ್ರಿಯತಮನಿಂದ ಮಚ್ಚಿನೇಟು ತಿಂದ ಪ್ರಿಯತಮೆ ಕೊನೆಗೂ ಬದುಕಿದಳು..

ಬೆಂಗಳೂರು: ತನ್ನ ಪ್ರೇಮಿಯಿಂದ ಮಚ್ಚಿನೇಟು ತಿಂದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರೇಯಸಿ ಕೊನೆಗು ಬದುಕುಳಿದಿದ್ದಾಳೆ.ಸದ್ಯ ಆಕೆ ಆರೋಗ್ಯ ಸ್ಥಿರವಾಗಿದ್ದು,ಸಾವಿನಿಂದ ಬಚಾವ್ ಆಗಿದ್ದಾಳೆ.
ಸದ್ಯ ನಿತ್ಯಶ್ರೀ ಎಂಬಾಕೆಯೇ ಬದುಕುಳಿದ ಪ್ರೇಯಸಿ.ಆದರೆ ಈಕೆಗೆ ಮಚ್ಚಿನೇಟು ಕೊಟ್ಟ ಪ್ರೇಮಿ ಗಿರೀಶ್ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾನೆ.
ಅಂದ ಹಾಗೇ ರಾಜ್ಯ ಮಟ್ಟದ ಕಬಡ್ಡಿ ಆಟಗಾರನಾಗಿದ್ದ ಗಿರೀಶ್, ಯುವತಿ ನಿತ್ಯಶ್ರೀಯನ್ನು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ. ಇಬ್ಬರು ಕೂಡ ಮಂಡ್ಯದ ನಿವಾಸಿಗಳಾಗಿದ್ದು, ಐದಾರು ತಿಂಗಳ ಹಿಂದೆ ಇಬ್ಬರು ಮನೆಯವರ ಭಯಕ್ಕೆ ಹೆದರಿ ಓಡಿ ಹೋಗಿದ್ದರು.
ಬಳಿಕ ನಿತ್ಯಶ್ರೀಗೆ ಗಿರೀಶ್‌ನೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ, ಸಂಬAಧಿಕರೊಬ್ಬರು ವಾಪಸ್ ಕರೆಸಿದ್ದರು.ಆಗ ನಿತ್ಯಶ್ರೀಯನ್ನು ಮಂಡ್ಯದ ಬದಲು ಬೆಂಗಳೂರಿನ ಸಂಬAಧಿಕರ ಮನೆಯಲ್ಲಿರಿಸಿದ್ದರು.ಬಳಿಕ ಆಕೆಯ ಕುಟುಂಬಸ್ಥರು ಇಬ್ಬರನ್ನು ಬೇರೆ ಮಾಡಿದ್ದರು.
ಬಳಿಕ ಪ್ರೇಯಸಿ ನಿತ್ಯಶ್ರೀಯ ಸಂಪರ್ಕವಿಲ್ಲದೇ ಹುಚ್ಚನಂತಾಗಿ ಕುಗ್ಗಿ ಹೋಗಿದ್ದ ಗಿರೀಶ್, ಒಂದು ತಿಂಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.ಆದರೆ ಪ್ರೇಯಸಿ ನಿತ್ಯಶ್ರೀಯು ಮೂರು ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟು, ಬೇರೆ ಯುವಕನ ಜೊತೆ ಮದುವೆಯಾಗಲು ರೆಡಿಯಾಗಿದ್ದಳು.
ಹೀಗಾಗಿ ನಿನ್ನೆ ಹುಡುಗನನ್ನು ನೋಡಲು ಹೊರಟು ಹೊರಗಡೆ ಬಂದಿದ್ದಳು.ಬೇರೆ ಹುಡುಗನ ಜೊತೆ ತನ್ನ ಪ್ರೇಯಸಿ ನಿತ್ಯಶ್ರೀ ಮದುವೆಯಾಗಬಾರದು.ಆತನ ಪರಿಚಯವಾಗುವ ಮೊದಲೇ ಪ್ರಿಯತಮೆಯನ್ನು ಮುಗಿಸಬೇಕೆಂದು ಬೆಂಗಳೂರು ನಗರದ ವಿಶಾಲ್ ಮಾರ್ಟ್ ಬಳಿ ಮಚ್ಚಿನಿಂದ ಗಿರೀಶ್ ದಾಳಿ ಮಾಡಿದ್ದಾನೆ. ನಂತರ ತಾವರೆಕೆರೆಯ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ನಡೆಸಿದ್ದರು.ಆ ವೇಳೆ ತನಿಖೆಯಲ್ಲಿ ಕೆಲ ವಿಚಾರಗಳು ಬಯಲಿಗೆ ಬಂದಿದ್ದು,ಕಬಡ್ಡಿ ಆಟಗಾರನನ್ನು ಪಾಗಲ್ ಮಾಡಿದ್ದೆ ಪ್ರಿಯತಮೆ ಯುವತಿ ನಿತ್ಯಶ್ರೀ ಎಂಬುದು ತಿಳಿದು ಬಂದಿದೆ.
ಇದೇ ವೇಳೆ ಆಸ್ಪತ್ರೆಯಲ್ಲಿದ್ದ ಯುವತಿ ನಿತ್ಯಶ್ರೀ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಗುಣಮುಖವಾಗುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment