ವಿಕಲಚೇತನರಿಗೆ ಆಹಾರ ಧಾನ್ಯ ಕಿಟ್ ವಿತರಣೆ..

ದೇವದುರ್ಗ(ರಾಯಚೂರು): ಕೊರೊನಾದಿಂದ ಇಡೀ ದೇಶವೇ ತಲ್ಲಣಗೊಂಡಿದ್ದು,ಜನರು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮುಖಂಡ,ಆರ್‌ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದ್ದಾರೆ.
ಎ.ವೆಂಕಟೇಶ ನಾಯಕ ಫೌಂಡೇಷನ್‌ವತಿಯಿAದ ೧೨೫ ಮಂದಿ ವಿಕಲಚೇತನರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಸೌಕರ್ಯ ಕಲ್ಪಿಸದೇ,ಜೊತೆಗೆ ಕಾರ್ಮಿಕರು, ಕೂಲಿಕಾರರ ಜೀವನೋಪಾಯಕ್ಕಾಗಿ ಅಗತ್ಯ ಪೂರ್ವನಿಯೋಜಿತ ಸೌಕರ್ಯಗಳ ಬಗ್ಗೆ ಆಲೋಚಿಸದೇ ಲಾಕ್ ಡೌನ್ ಘೋಷಣೆ ಮಾಡಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿವೆ ಎಂದು ದೂರಿದರು.
ಇದೇ ಸಂದರ್ಭದಲ್ಲಿ ಅಬ್ದುಲ್ ಅಜೀಜ್, ಸಾಜೀದ್,ಮಹಿಬೂಬ್, ರಂಗಪ್ಪ ಗೊಸಲ್,ರಾಮಣ್ಣ ಕರಡಿಗುಡ್ಡ,ವಿಕಲಚೇತನರ ಸಂಘಟನೆ ಗೌರವಾಧ್ಯಕ್ಷ ಬಸವನಗೌಡ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment