ಅಂಬೇಡ್ಕರ್-ವಾಲ್ಮೀಕಿ ಸಮುದಾಯ ಭವನಕ್ಕೆ ಭೂಮಿ ಪೂಜೆ

ಅಥಣಿ(ಬೆಳಗಾವಿ):ಕಾಗವಾಡ ಕ್ಷೇತ್ರದಲ್ಲಿ ಬರುವ ಎಲ್ಲಾ ಸಮಾಜದ ಸಮುದಾಯ ಭವನಗಳಿಗೆ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಸಿದ್ಧವಾಗಿದ್ದೇನೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
ಅಂದ ಹಾಗೇ ಕಾಗವಾಡದ ಕಲ್ಲೂತ್ತಿ ಗ್ರಾಮದಲ್ಲಿ ಸುಮಾರು ೧೨ ಲಕ್ಷ ರೂಪಾಯಿ ವೆಚ್ಚದ ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ಹಾಗೂ ಕಲ್ಲುತಿ ಗ್ರಾಮದಲ್ಲಿ ಸುಮಾರು ೧೨ ಲಕ್ಷ ರುಪಾಯಿ ವೆಚ್ಚದ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಕ್ಷೇತ್ರದಲ್ಲಿ ಬರುವ ಗ್ರಾಮೀಣ ರಸ್ತೆಗಳಿಗೆ ಮತ್ತು ಸಮುದಾಯ ಭವನಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ.
ಜೊತೆಗೆ ಕ್ಷೇತ್ರದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ನೆನಗುದಿಗೆ ಬಿದ್ದಿರುವಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು.ಅಲ್ಲದೆ, ನೀರಾವರಿಗೆ ಹೆಚ್ಚಿನ ಆದ್ಯತೆ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಎಲ್ಲವುಗಳನ್ನು ಈಡೇರಿಸುವಂತಹ ಕೆಲಸ ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಗವಾಡದ ಯುವ ನಾಯಕರಾದ ಶ್ರೀನಿವಾಸ ಪಾಟೀಲ,ವಿನಾಯಕ ಬಾಗಡಿ,ರೇವಣ್ಣಾ ಪಾಟೀಲ,ಈಶ್ವರ ಕುಂಬಾರೆ , ವಿಠ್ಠಲ ಗಾಡಿವಡ್ಡರ,ಮಹಾದೇವ ಮಂಡಲೆ,ವಿನಾಯಕ ಪಾಟೀಲ,ಜಮಶೆಟ್ಟಿ ಪವಾಡಿ,ವಿಜಯ ವಾಘಮೋಡೆ,ವಿರೇಶ ಖಾನಗೌಡ, ಮಹಾದೇವ ಮೋಹಿತೆ,ಕುಮಾರ ನಾಯಿಕ್,ಮಲ್ಲಿಕಾರ್ಜುನ ಜಾಧವ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಬಸವರಾಜ ಯಾದವಾಡ ಮುಂತಾದವರು ಉಪಸ್ಥಿತರಿದ್ದರು.

ಸತೀಶ ಕೋಳಿ ಎಕ್ಸ್ ಪ್ರೆಸ್ ಟಿವಿ ಅಥಣಿ(ಬೆಳಗಾವಿ)

Please follow and like us:

Related posts

Leave a Comment