ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಮಳವಳ್ಳಿ(ಮಂಡ್ಯ): ಕೇಂದ್ರ ಸರ್ಕಾರ. ವಿದ್ಯುತ್ ಇಲಾಖೆ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಮಳವಳ್ಳಿ ಪಟ್ಟಣದ ಚೆಸ್ಕಾಂ ಕಚೇರಿ ಎದುರು ಚೆಸ್ಕಾಂ ಪ್ರಾಥಮಿಕ ಸಮಿತಿಯ ಮುಖಂಡರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆ ಖಾಸಗೀಕರಣ ಮಾಡಲು ಹೊರಡಿದ್ದು,ಬೇಡ ಬೇಡ ಖಾಸಗೀಕರಣ ಬೇಡ ಎಂಬ ಘೋಷಣೆ ಕೂಗಿದರು.
ಇನ್ನೂ ಚೆಸ್ಕಾಂ ಇಲಾಖೆ ಬೆರಳಚ್ಚುಗಾರ ಬಸವಶೆಟ್ಟರು ಮಾತನಾಡಿ,ರಾಜ್ಯ ಕಮಿಟಿ ಆದೇಶದಂತೆ ಇಂದು ನೌಕರರು ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿ ಒಂದು ದಿನ ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಪತ್ರಿಭಟನೆಯಲ್ಲಿ ಎಇ ಮೋಹನ್ ರಾಜ್,ನಾಗೇಂದ್ರ ಸೇರಿದಂತೆ ಚೆಸ್ಕಾಂ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment