ರಾಯಚೂರಿನಲ್ಲಿಂದು ಯಾವುದೇ ಪ್ರಕರಣಗಳಿಲ್ಲ..

ರಾಯಚೂರು:ಇಂದು ರಾಯಚೂರಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿಲ್ಲ.ಇದರಿಂದ ಜಿಲ್ಲೆಯ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ವರದಿಯ ಪ್ರಕಾರ ಜಿಲ್ಲೆಯಲ್ಲಿ ಇದುವರೆಗೂ ೧೧೭ ಸೋಂಕಿತರ ಸಂಖ್ಯೆ ಇದ್ದು,ಇದರಲ್ಲಿ ೩೪ ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ಇಂದು ರಾತ್ರಿಯಿಂದ ೩೦ರ ವರೆಗರ ರಾತ್ರಿ ಕಫ್ರ‍್ರ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಆದೇಶ ಹೊರಡಿಸಿದ್ದಾರೆ.
ಇನ್ನು ರಾಯಚೂರು ಜಿಲ್ಲೆಯಲ್ಲಿ ನಿನ್ನೆಯಷ್ಟೇ ೮೩ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಜನ ಭಯದಲ್ಲಿ ಬದುಕುವಂತಾಗಿದೆ. ಆದರೆ ಇಂದು ಮತ್ತೆ ಅದೆಷ್ಟು ಪ್ರಕರಣಗಳು ಬರುತ್ತವೆಯೋ ಎಂದು ಎದುರು ನೋಡುತ್ತಿದ್ದವರಿಗೆ ಕೊಂಚ ನಿರಾಳವಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣಗಳಿಂದ ಭಯದ ವಾತಾವರಣ ಉಂಟಾಗಿದ್ದು,ಈ ಹಿನ್ನೆಲೆಯಲ್ಲಿ ಇಂದಿನಿAದ ರಾತ್ರಿ ವೇಳೆ ಅಂದರೆ ೯:೦೦ ರಿಂದ ೫:೦೦ ಗಂಟೆವರೆಗೆ ಜನರ ಓಡಾಟ ನಿಷೇಧಿಸಲು ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಸದ್ಯ ಹೊಸ ಆದೇಶದನ್ವಯ ರಾತ್ರಿ ೯ರ ನಂತರ ನಾಲ್ಕು ಜನಕ್ಕಿಂತ ಹೆಚ್ಚು ಜನ ಒಡಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ತಿಳಿಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ರಾಯಚೂರು

Please follow and like us:

Related posts

Leave a Comment