ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸಿದ ಡಿಸಿಎಂ..

ಅಥಣಿ(ಬೆಳಗಾವಿ): ಕೊರೊನಾ ಸಂಕಷ್ಟದ ಸಮಯದಲ್ಲಿ ಹಾಗೂ ಲಾಕ್‌ಡೌನ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ವಿತರಿಸಲಾಗಿದೆ.
ಸದ್ಯ ರಾಜ್ಯ ಸರ್ಕಾರದ ಸುತ್ತೋಲೆ ಮೇರೆಗೆ ಅಥಣಿ ತಾಲೂಕಿನ ಸಹಕಾರಿ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳ ಮೂಲಕ ೪೫೬ ಆಶಾ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.
ಅಂದ ಹಾಗೇ ಐನಾಪುರ, ಕೃಷ್ಣಾ ಕಿತ್ತೂರ,ಮದಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕರ್ತವ್ಯ ನೀರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಡಿಸಿಎಮ್ ಲಕ್ಷ್ಮಣ ಸವದಿ ಪ್ರೋತ್ಸಾಹ ಧನ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಕೊರೊನಾ ವೈರಸ್ ಹರಡುವಿಕೆ ಸಂದರ್ಭದಲ್ಲಿ ಜೀವ ಹಾನಿ ತಪ್ಪಿಸಲು ವೈದ್ಯರ ಜೊತೆಗೂಡಿ ಆಶಾ ಕಾರ್ಯಕರ್ತರು ಕೆಲಸ ಮಾಡಿದ್ದನ್ನು ಗುರುತಿಸಿ ಅಭಿನಂದಿಸುವ ಕೆಲಸಕ್ಕೆ ಸರ್ಕಾರ ಚಾಲನೆ ನೀಡಿದೆ ಎಂದರು.
ಇನ್ನು ಅಥಣಿ ತಾಲೂಕಿನ ೪೫೬ ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ಹಣ ಕೊಟ್ಟಿದ್ದು,ಸಿಎಂ ಮನವಿ ಮೇರೆಗೆ ದಾಗ ರಾಜ್ಯದ ಎಲ್ಲ ಸಹಕಾರಿ ಸಂಘಗಳು ತಮ್ಮಿಂದ ಸಾಧ್ಯವಾದಷ್ಟು ಪ್ರೋತ್ಸಾಹ ಧನಕ್ಕೆ ಹಣ ನೀಡಿವೆ ಎಂದು ತಿಳಿಸಿದರು.
ಈ ವೇಳೆ ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆಯ ರವಿ ಪೂಜಾರಿ,ಅಥಣಿ ಕೋ ಆಪರೆಟಿವ್ ಡೆವಲಪ್ಮೆಂಟ್ ಆಫೀಸರ್ ವಿನಾಯಕ ಲಕ್ಸಾಣಿ,ಮಹಾಂತೇಶ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದ ರವಿ ಪೂಜಾರಿ, ವೀರಭದ್ರೇಶ್ವರ ಕೋ ಆಪರೇಟಿವ್ ಪ್ರಕಾಶ ಕೊರಬು,
ಕರ್ನಾಟಕ ಕರಾವಳಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಮೇಶ ರಾವ್ ಬಂಟೋಡ್ಕರ್, ಮತ್ತು ಕೃಷ್ಣಾ ಕಿತ್ತೂರ, ವರ್ಧಮಾನ, ಮಹಾಲಕ್ಷ್ಮಿ, ಚನ್ನಬಸವೇಶ್ವರ, ಹಜರತ ಟಿಪ್ಪು ಸುಲ್ತಾನ್, ಶ್ರೀ ಸಿದ್ದೇಶ್ವರ ಕೋ ಆಪರೇಟಿವ್ ಸೇರಿದಂತೆ ಹಲವು ಸಹಕಾರಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸತೀಶ ಕೋಳಿ ಎಕ್ಸ್ ಪ್ರೆಸ್ ಟಿವಿ ಅಥಣಿ(ಬೆಳಗಾವಿ)

Please follow and like us:

Related posts

Leave a Comment