ಮೃತ ಪಟ್ಟ ಕುರಿಗಾಹಿ ಕುಟುಂಬಕ್ಕೆ ಪರಿಹಾರ

ಹಿರಿಯೂರು(ಚಿತ್ರದುರ್ಗ):ಕುರಿ ತೊಳೆಯಲು ಹೋಗಿದ್ದಾಗ ಆಕಸ್ಮಿಕವಾಗಿ ಅಜ್ಜ, ಮೊಮ್ಮಗ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡ ಡಾ. ಸಾಸಲು ಸತೀಶ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಅಲ್ಲದೆ,ಮೃತರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಕುಟುಂಬದವರಿಗೆ ಧೈರ್ಯ ತುಂಬಿ,ವೈಯಕ್ತಿಕ ಪರಿಹಾರ ನೀಡಿದರು.
ಇದೇ ವೇಳೆ ಮಾತನಾಡಿದ ಡಾ.ಸತೀಶ್ ಕುರಿ ತೊಳೆಯಲು ಹೋಗಿ ಸಾವನ್ನಪ್ಪಿರುವುದು ನಿಜಕ್ಕೂ ನೋವಿನ ಸಂಗತಿ, ಕುಟುಂಬಕ್ಕೆ ಆಧಾರವಾಗಿದ್ದ ಮಗ ಮತ್ತು ಯಜಮಾನನನ್ನು ಕಳೆದುಕೊಂಡ ಕುಟುಂಬದ ಬದುಕು ಅತಂತ್ರ ಸ್ಥಿತಿಯಲ್ಲಿ ಇದೆ.ಕುರಿಗಾರರು ಅಸಂಘಟಿತ ವಲಯವಾಗಿದ್ದು, ಅವರ ನೋವುಗಳು ಯಾರಿಗೂ ಅರ್ಥವಾಗಲ್ಲ. ಸರ್ಕಾರ ಕೂಡ ಇದರ ಕಡೆ ಗಮನ ಹರಿಸುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿ ಇರುವ ಈ ಕುಟುಂಬಕ್ಕೆ ಸರ್ಕಾರ ಈ ಕೂಡಲೇ ಪರಿಹಾರ ಘೋಷಿಸಬೇಕು ಎಂದರು.
ಇಂತಹ ಘಟನೆಗಳು ಆಕಸ್ಮಿಕವಾಗಿ ಅಲ್ಲಲ್ಲಿ ನಡೆಯುತ್ತಿದ್ದು,ಸರ್ಕಾರ ಇದಕ್ಕೆ ಒಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕು.ಅಲ್ಲದೆ, ಇಂತಹ ಅವಘಡಗಳು ಸಂಭವಿಸಿದಾಗ ಸರ್ಕಾರ ನಿರ್ಧಿಷ್ಟವಾದ ಯೋಜನೆಯನ್ನು ರೂಪಿಸಿ ಕಾರಿಗಾಯಿಗಳ ಬದುಕಿಗೆ ನೆರವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದೇ ವೇಳೆ ನಗರಸಭೆ ಸದಸ್ಯ ಚಿತ್ರಜೀತ್ ಯಾದವ್, ಕಾಡುಗೊಲ್ಲ ಸಮಾಜದ ಮುಖಂಡರಾದ ರಂಗಯ್ಯ, ಕರವೇ ಕೃಷ್ಣ ಪೂಜಾರಿ , ಎಸ್. ತಿಮ್ಮಯ್ಯ ಮ್ಯಾಕ್ಲೂರಹಳ್ಳಿ, ವಕೀಲ ಮಂಜುನಾಥ್, ಪ್ರಭು ಯಾದವ್, ರಾಜಣ್ಣ, ಮಂಜುನಾಥ್, ಚಿಕ್ಕಣ್ಣ, ಪಿ.ಎಸ್. ಪ್ರಶಾಂತ್ , ಕೇಶವ್ , ಮ್ಯಾಕ್ಲೂರಹಳ್ಳಿ ಚಿದಾನಂದ್, ಸಂಪತ್, ರಮೇಶ್, ಮಧು ಹರಿಯಬ್ಬೆ. ಸೇರಿದಂತೆ ಮತ್ತಿತರ ಇದ್ದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಚಿತ್ರದುರ್ಗ

Please follow and like us:

Related posts

Leave a Comment