ಕುಡಿಯಲು ನೀರಿಲ್ಲದೇ ಹಾಹಾಕಾರ.. ತೆರೆಯದ ಗ್ರಾಮ ಪಂಚಾಯತ್ ಕಛೇರಿ..

ಇಂಡಿ(ವಿಜಯಪುರ): ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂಗೋಗಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ.
ಸದ್ಯ ಇದರ ಬಗ್ಗೆ ಇಲ್ಲಿನ ಗ್ರಾಮಸ್ಥರು ಸುಮಾರು ೧ ತಿಂಗಳಿನಿAದ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಬದಲಿಗೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಅಂದ ಹಾಗೇ ಸಂಗೋಗಿ ಗ್ರಾಮದ ನಿವಾಸಿ ಸುನೀಲ ವಾಲಿಕಾರ ಮಾತನಾಡಿ, ನಮ್ಮ ಗೋಳು ಕೇಳುವರಾರು?,ಜನರ ಸಮಸ್ಯೆ ಆಲಿಸಬೇಕಿದ್ದ ಗ್ರಾಮ ಪಂಚಾಯತ್ ಸದಸ್ಯರು ಸರ್ಕಾರದ ಆದೇಶ ಬರುವ ಮುಂಚೆಯೇ ಅಧಿಕಾರ ಮುಗಿದಂತೆ ವರ್ತಿಸುತ್ತಿದ್ದಾರೆ.
ಜೊತೆಗೆ ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕಿದ್ದ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಾರದೇ ಅಸಡ್ಡೆತನ ಪ್ರದರ್ಶನ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನೂ ಹಲವಾರು ಕೆಲಸ ಕಾರ್ಯಗಳಿಗೆ ಬರುವ ಗ್ರಾಮಸ್ಥರು ಬಾಗಿಲು ಮುಚ್ಚಿದ ಗ್ರಾಮ ಪಂಚಾಯತ್ ಕಚೇರಿ ನೋಡಿಕೊಂಡು ಹಿಂದಿರುಗಬೇಕಾದ ಪರಿಸ್ಥಿತಿ ಎದುರಾಗಿದೆ.
ಒಟ್ನಲ್ಲಿ ಸಂಗೋಗಿ ಗ್ರಾಮದಲ್ಲಿ ನೀರಿಗೆ ಹಾಹಾಕಾರವನ್ನು ಕೂಡಲೇ ಸಂಬAಧಿಸಿದ ಇಲಾಖೆ ಪರಿಹರಿಸಲು ಮುಂದಾಗಬೇಕಾಗಿದೆ.

ಶAಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment