ಸ್ವಂತ ಖರ್ಚಿನಲ್ಲಿ ಆಹಾರ ಕಿಟ್ ನೀಡಿದ ಹುಬ್ಬಳ್ಳಿ ಇಂಜನಿಯರ್..

ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ನಿರ್ಗತಿಕರು ಹಾಗೂ ಬಡವರಿಗೆ ಅನಕೂಲವಾಗಲಿ ಎಂದು ಜಿಲ್ಲಾಡಳಿತದ ಮುಖಾಂತರ ಹುಬ್ಬಳ್ಳಿಯ ಇಂಜನಿಯರ್ ಸಂಜೀವ್ ಜೋಶಿ ತಮ್ಮ ಸ್ವಂತ ಖರ್ಚಿನಲ್ಲಿ ೨೫ಕ್ಕೂ ಹೆಚ್ಚು ಆಹಾರ ಕಿಟ್ ವಿತರಣೆ ಮಾಡಿದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು.ಹೀಗಾಗಿ ಹಲವಾರು ವರ್ಗದ ಜನರು ಸಂಕಷ್ಟ ಸಿಲುಕಿದ್ದು,ಅವರಿಗೆ ಅನೂಕೂಲವಾಗಲಿ ಎಂದು ಅಕ್ಕಿ,ಎಣ್ಣೆ,ಸಕ್ಕರೆ ಹಾಗೂ ದಿನ ನಿತ್ಯ ಉಪಯೋಗಿಸುವ ದಿನಸಿ ವಸ್ತುಗಳನ್ನು ತಹಶೀಲ್ದಾರ್ ಮುಖಾಂತರ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, ಎಫ್‌ಡಿಸಿ ಹುಕ್ಕೇರಿ,ಮಕಾನದಾರ,ಸಂಜೀವ್ ಜೋಶಿ ಹಾಗೂ ಇನ್ನಿತರರು ಹಾಜರಿದ್ದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment