ಅರಸೀಕೆರೆಯಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ

ಹಾಸನ:ಅರಸೀಕೆರೆ ನಗರದಿಂದ 2 ಕಿಲೋಮೀಟರ್ ದೂರದಲ್ಲಿರುವ ಮಾಲೇಕಲ್ ತಿರುಪತಿ ರಸ್ತೆಯ ಮೇಳಿಯಮ್ಮ ದೇವಸ್ಥಾನದ ಬಳಿ ಕೆಲದಿನಗಳಿಂದ ರಾತ್ರಿ ಹೊತ್ತು ಚಿರತೆ ಕಾಣಿಸಿಕೊಳ್ಳುತ್ತಿತ್ತು. ಆಗಾಗ ತೋಟಕ್ಕೆ ಬಂದು ಹೋಗುತ್ತಿದ್ದ ಚಿರತೆ, ನಾಯಿಗಳು-ಹಸುವಿನ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿತ್ತು. ಚಿರತೆ ಓಡಾಡಿದ ಗುರುತನ್ನು ಕಂಡು ಭಯಭೀತರಾಗಿದಂತಹ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು.ಇದ್ದರಿಂದ ಎಚ್ಚೇತ್ತ ಅರಣ್ಯಸಿಬ್ಬಂಧಿಗಳು ಮೋಹನ್ ರವರ ತೋಟದಲ್ಲಿ ಬೋನ್ ಇರಿಸಿ ಕೊನೆಗೂ ಚಿರತೆಯನ್ನು ಬೋನಿನೊಳಗೆ ಸಿಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಟ್ಟದ ತುದಿಯಲ್ಲಿರುವ ತೋಟಗಳಿಗೆ ಅಂಟಿಕೊಂಡಿರುವ ನಾಗಪುರಿಯ ಅರಣ್ಯದಲ್ಲಿ ಕಾಡುಪ್ರಾಣಿಗಳಾದ ಚಿರತೆ,ಕರಡಿ ಜಿಂಕೆಗಳು,ಹಂದಿಗಳು,ನವಿಲು ಸೇರಿದಂತೆ ಪ್ರಾಣಿ-ಪಕ್ಷಿಗಳು ವಾಸವಾಗಿದ್ದು, ಆಹಾರ ಹಾಗೂ ನೀರನ್ನು ಹುಡುಕುತ್ತಾ ಸುತ್ತಮುತ್ತಲಿನ ತೋಟಗಳಿಗೆ ಬರುವುದು ಸಾಮಾನ್ಯವಾಗಿತ್ತು.ಅದರಂತೆ ಚಿರತೆ ಕೂಡ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದು ಜನರಲ್ಲಿ ಆತಂಕ ಸೃಷ್ಟಿಮಾಡಿತ್ತು.ಅರಣ್ಯಾಧಿಕಾರಿಗಳು ಚಿರತೆಯನ್ನು ಬೋನಿನೊಳಗೆ ಸಿಕ್ಕಿಸಿ ಬೇರೆಡೆ ತೆಗೆದುಕೊಂಡು ಹೋಗಿದ್ದು ಸ್ಥಳೀಯರಲ್ಲಿ ನಿಟ್ಟುಸಿರು ಬಿಟ್ಟಾಂತಾಗಿದೆ.

Please follow and like us:

Related posts

Leave a Comment