ಪತ್ನಿ-ಮಗನಿಗೆ ಸೋಂಕು ದೃಡಪಟ್ಟ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆ.

ಪತ್ನಿ ಹಾಗು ಮಗನಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ನಿವಾಸಿಯಾಗಿರುವ ನಾಗರಾಜು ಪುತ್ರನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.ನಂತರ ಪತ್ನಿಗೆ ಸೋಂಕು ಪರೀಕ್ಷಿಸಿದಾಗ ಅವರಿಗೂ ಸೋಂಕು ಇರುವುದು ಧೃಡವಾಗಿತ್ತು. ಹೀಗಾಗಿ ಇಡೀ ಏರಿಯಾವನ್ನ ಸೀಲ್‌ಡೌನ್ ಮಾಡಲಾಗಿತ್ತು. ಇದರಿಂದ ಬೇಸತ್ತ ಅಲ್ಲಿನ ಜನರು ನಾಗರಾಜು ಕುಟುಂಬಸ್ಥರನ್ನ ಅವಮಾನಿಸಿದ್ದರು. ಮನೆ ಖಾಲಿ ಮಾಡಿಕೊಂಡು ದೂರ ಹೋಗುವಂತೆ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚುತ್ತಿದ್ದಾರೆ.

Please follow and like us:

Related posts

Leave a Comment