ರಸ್ತೆ ಅಪಘಾತದಲ್ಲಿ ನರಳಾಡುತ್ತಿದ್ದ ಮುಳ್ಳುಹಂದಿ ರಕ್ಷಣೆ..

ಕಲಬುರಗಿ: ಕಲಬುರಗಿಯ ವಿಶ್ವವಿದ್ಯಾಲಯದ ಆವರಣದ ನೃಪತುಂಗ ಹಾಸ್ಟಲ್ ಬಳಿ ನಡೆದ ಅಪಘಾತದಲ್ಲಿ ಮುಳ್ಳು ಹಂದಿ ಸೊಂಟ ಮುರಿದುಕೊಂಡು ರಸ್ತೆಯಲ್ಲಿ ನರಳಾಡುತ್ತಿತ್ತು. ಇದನ್ನು ಕಂಡ ಇಎಸ್ಐ ಆಸ್ಪತ್ರೆಯ ವೈದ್ಯರೊಬ್ಬರು, ನರಳಾಡುತ್ತಿದ್ದ ಹಂದಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಕಂಡ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ ಮೋಟಗಿ ಸ್ಥಳಕ್ಕೆ ದೌಡಾಯಿಸಿ ಅರಣ್ಯ ಸಿಬ್ಬಂದಿಗಳ ಸಹಾಯದಿಂದ ಮುಳ್ಳು ಹಂದಿಯನ್ನ ರಕ್ಷಣೆ ಮಾಡಲಾಗಿದೆ.ಬಲವಾದ ಹೊಡೆತದಿಂದ ನರಳುತ್ತಿದ್ದ ಮುಳ್ಳು ಹಂದಿಗೆ ಮಿನನಿ ಝೂ ನಲ್ಲಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ.

Please follow and like us:

Related posts

Leave a Comment