ಕಲ್ಮನೆ ಕಾಮೇಗೌಡರಿಗೂ ಅಂಟಿದ ಕೊರೊನಾ ಸೋಂಕು..

ಮಂಡ್ಯ: ಮಳವಳ್ಳಿ ತಾಲ್ಲೂಕು, ದಾಸನದೊಡ್ಡಿ ಗ್ರಾಮದ 85 ವರ್ಷದ ಕಲ್ಮನೆ ಕಾಮೇಗೌಡರು ಜನರನ್ನು ನೀರಿನ ಸಮಸ್ಯೆಯಿಂದ ಮುಕ್ತಿಗೊಳಿಸಬೇಕೆಂದು ತಾನು ಸಾಕಿದ್ದಂತಹ ಕುರಿಗಳನ್ನು ಮಾರಿ ಕೆರೆ ನಿರ್ಮಾಣ ಮಾಡಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋಧಿಯವರಿಂದ ಪ್ರಶಂಸೆಯನ್ನು ಪಡೆದುಕೊಂಡಿದ್ದರು. ಕೆರೆ ನಿರ್ಮಾಣದ ಜೊತೆಗೆ 2 ಸಾವಿರ ಮರಗಿಡಗಳನ್ನು ಬೆಳೆಸಿ ಪ್ರಕೃತಿನ್ನು ಸಂರಕ್ಷಿಸುವ ಕೆಲಸ ಮಾಡಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಪಡೆದಿದ್ದರು.ಅಂತಹ ವ್ಯಕ್ತಿಗೂ ಈಗಾ ಕೊರೊನಾ ಪಾಸಿಟೀವ್ ದೃಡ ಪಟ್ಟಿದೆ. ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದ ಸಾಕಷ್ಟು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದರು.ಈ ಅಂಟು ರೋಗಕ್ಕೆ ಕಲ್ಮನೆ ಕಾಮೇಗೌಡರು ಸೇರ್ಪಡೆಯಾಗಿರುವುದು ಅಘಾತಕಾರಿ ವಿಷಯವಾಗಿದೆ.ಬಲಗಾಲಿನಲ್ಲಿ ಗಾಯ ಆಗಿದ್ದರಿಂದ ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದ ಅವರು ನಿತ್ಯ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆ ಅಲೆದಾಡುತ್ತಿರವಾಗ ಸೋಂಕು ತಗುಲಿರಬಹುದೆಂಬಾ ಶಂಕೆ ವ್ಯಕ್ತವಾಗಿದ್ದು, ಸದ್ಯಕ್ಕೆ ಕಾಮೇಗೌಡರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾಮೇಗೌಡರ ಮನೆಯ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದ್ದು ಆಸ್ಪತ್ರೆಯಲ್ಲಿ ಕಾಮೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಈ ಕೊರೊನಾ ಎಂಬಾ ಮಹಾಮಾರಿಗೆ ಅದೇಷ್ಟು ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೊ, ಇದರಿಂದ ಜನರಿಗೆ ಮುಕ್ತಿ ಯಾವಾಗ ಕಾದುನೋಡಬೇಕಿದೆ.

Please follow and like us:

Related posts

Leave a Comment