ಬೆಂಗಳೂರು: ಆಸ್ವೀಜಮಾಸ, ಕಾರ್ತಿಕ ಮಾಸದಲ್ಲಿ ಕೊರೊನಾ ಹಳ್ಳಿಗಳ ಕಡೆ ಹಬ್ಬಲಿದ್ದು,ಮುಂದಿನ ಮೂರು ತಿಂಗಳು ಹಳ್ಳಿಗಳಲ್ಲಿ ಮರಣ ಮೃದಂಗ ಬಾರಿಸಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದ್ದಿದ್ದಾರೆ. ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು, ಸ್ಚಚ್ಛತೆ, ಸುರಕ್ಷತೆ, ಅಂತರ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆಯನ್ನು ಮಾತುಗಳನ್ನು ಆಡಿದ್ದಾರೆ. ಜನರು ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ.ಜನರು ಸ್ಚಚ್ಚತೆ, ಆಚಾರ, ವಿಚಾರ ಕೈಬಿಟ್ಟಿದ್ದಕ್ಕೆ ಕೊರೊನಾ ಎಂಬಾ ಮಾಹಾಮಾರಿ ಹೊಡೆತ ಜನರಿಗೆ ತಟ್ಟಿದೆ.ಧರ್ಮದ ಹೆಸರಿನಲ್ಲಿ ನಡೆಯುವ ಆಚರಣೆಗಳು ರೋಗ-ರುಜಿನಗಳನ್ನು ತಡೆಯುತ್ತಿದ್ದವು.ಆದರೆ ಈಗಾ ಆಧುನಿಕತೆಯ ಹೆಸರಿನಲ್ಲಿ ಎಲ್ಲವೂ ಮಾಯವಾಗಿವೆ.ಸರ್ಕಾರದ ಕೆಲ ತೀರ್ಮಾನಗಳು ಕೊರೊನಾ ಕಾಯಿಲೆಯನ್ನು ಹೆಚ್ಚು ಮಾಡಿವೆ. ಸರ್ಕಾರ ಮತ್ತೊಂದು ತಿಂಗಳು ಲಾಕ್ ಡೌನ್ ಮುಂದುವರೆಸಿದ್ದರೆ ಕೊರೊನಾ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿತ್ತು, ಬಹುಬೇಗ ಲಾಕ್ ಡೌನ್ ತೆರವು ಮಾಡಿದ್ದರಿಂದ ಕೊರೊನಾ ಜಾಸ್ತಿಯಾಗಿದ್ದು ನಿಯಂತ್ರಣಕ್ಕೆ ಬಾರದಂತಾಗಿದೆ. ಸರ್ಕಾರ ಆರ್ಥಿಕ ದೃಷ್ಟಿಯಿಂದ ದೇವಾಸ್ಥಾನಗಳನ್ನು ಮುಚ್ಚಿ ವಿನಾಶಕಾರಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಜನರು ನಂಬಿದ್ದ ಧಾರ್ಮಿಕ ಕೇಂದ್ರ ಮುಚ್ಚಿದ್ದರಿಂದ ದೇವರ ಅವಕೃಪೆಗೆ ಪಾತ್ರವಾಗುವಂತಾಗಿದೆ. ಸರ್ಕಾರದ ಈ ತಪ್ಪು ನಿರ್ಧಾರದಿಂದಲೇ ಕೊರೊನಾ ಹೆಚ್ಚಾಗಿದೆ ಎಂದು ಕೋಡಿ ಶ್ರೀ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಸರ್ಕಾರದ ವಿರುಧ್ಧ ಅಸಮಾಧಾನ ಹೊರಹಾಕಿದ ಕೋಡಿಮಠದ ಶ್ರೀಗಳು

Please follow and like us: