ನಕಲಿ ರೆಡ್ ಮರ್ಕ್ಯೂರಿ ಟ್ಯೂಬ್ ದಂದೆ…

ಮಂಡ್ಯ:ಜನರಿಗೆ ಹಳೆಯ ರೇಡಿಯೊ,ಟಿವಿಗಳಲ್ಲಿರುವ ರೆಡ್ ಮರ್ಕ್ಯೂರಿ ಟ್ಯೂಬ್ ಕೊಡಿಸುವುದಾಗಿ ನಂಬಿಸಿ ಹಣ ದೋಚುತ್ತಿದ್ದ ಖದೀಮರನ್ನು. ಮಳವಳ್ಳಿ ಗ್ರಾಮಾಂತರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಸುಮಾರು 10 ಲಕ್ಷದ 36 ಸಾವಿರ ರೂ ನಗದು, ಒಂದು ಕಾರು ಎರಡು ಮೋಟರ್ ಸೈಕಲ್ ಗಳು ಸೇರಿ ಸುಮಾರು 14 ಲಕ್ಷ ರೂಪಾಯಿಯ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಬಸವನಗುಡಿ ನಿವಾಸಿಯಾದ ನೀತಿನ್ ರಾಜ್ ರವರಿಗೆ ಈ ಖದೀಮರು 26ಲಕ್ಷ ರೂಪಾಯಿ ವಂಚನೆ ಮಾಡಿದ್ದು ಪರಾರಿಯಾಗಿದ್ದರು.ಇದರ ಹಿನ್ನೆಲೆ ನೀತಿನ್ ರಾಜ್ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರಶುರಾಮ್ , ಅಡಿಷನಲ್ ಎಸ್ಪಿ ಶೋಭರಾಣಿ ಮಾರ್ಗದರ್ಶನದಲ್ಲಿ ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್-ಪೆಕ್ಟರ್ ಧನರಾಜ್, ಟೌನ್ ಇನ್ಸ್-ಪೆಕ್ಟರ್ ರಾಜೇಶ್,ರವಿಕುಮಾರ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಆರೋಪಿಗಳಾದ ಕೊಳ್ಳೆಗಾಲ ಗ್ರಾಮದ ಬಾಬು, ಸಲ್ಲು,ಸಾಜೀದ್,ಪಿ.ರಾಜೇಶ್,ಉಮೇಶ್,ರಾಜೇಶ್ ಸಿ,ರನ್ನು ಬಂಧಿಸಲಾಗಿದೆ, ಇಬ್ಬರೂ ಮಹಿಳೆಯರು ಈ ದಂಧೆಯಲ್ಲಿ ಭಾಗಿಯಾಗಿದ್ದು, ಪೋಲಿಸರಿಗೆ ಚಳ್ಳೆ ಹಣ್ಣು ತಿನಿಸಿ ಎಸ್ಕೇಪ್ ಆಗಿದ್ದಾರೆ. ತಲೆಮರೆಸಿಕೊಂಡಿರುವ ಚಾಲಾಕಿ ಮಹಿಳೆಯರನ್ನು ಹಿಡಿಯಲು ಪೋಲಿಸರು ಬಲೆ ಬೀಸಿದ್ದು,ಹಗಲು ರಾತ್ರಿ ಅನ್ನದೇ ಶೋಧ ನಡೆಸಲಾಗುತ್ತಿದೆಯೆಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

Please follow and like us:

Related posts

Leave a Comment