ಕಲ್ಪತರು ನಾಡಿನಲ್ಲಿ ನಿಲ್ಲದ ಕೊರೊನಾ ಹಾವಳಿ

ತುಮಕೂರು ಜಿಲ್ಲೆಯಲ್ಲಿ ಮತ್ತೆ ಕೊರೋನಾ ರಣಕೇಕೆ ಮುಂದುವರೆದಿದ್ದು, ಜಿಲ್ಲೆಯಲ್ಲಿ ಇಂದು ಹೊಸದಾಗಿ 51 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆಯಾಗಿ 28336 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ, ಅದರಲ್ಲಿ 23883 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದೆ.
ತಾಲ್ಲೂಕುವಾರು ವರದಿ :
ಚಿಕ್ಕನಾಯಕನಹಳ್ಳ -03, ತುರುವೇಕೆರೆ – 01, ಗುಬ್ಬಿ – 03, ಕುಣಿಗಲ್ – 07, ಪಾವಗಡ – 05, ಶಿರಾ – 04, ಮಧುಗಿರಿ – 02, ತಿಪಟೂರು – 03, ತುಮಕೂರು – 23 ಒಟ್ಟು 51 ಹೊಸ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ತುಮಕೂರು ಜಿಲ್ಲೆಯಲ್ಲಿ 51 ಮಂದಿಗೆ ಹೊಸದಾಗಿ ಕೋವಿಡ್ – 19 ದೃಢಪಟ್ಟಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ಮಾಹಿತಿಯನ್ನು ನೀಡಿದ್ದಾರೆ. ಇಂದು ಬಿಡುಗಡೆ ಮಾಡಿರುವ ವರದಿಯಲ್ಲಿ 48 ಜನರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದರಿಂದಾಗಿ ಒಟ್ಟು ಬಿಡುಗಡೆ ಹೊಂದಿರುವವರ ಸಂಖ್ಯೆ 485ಕ್ಕೆ ಏರಿಕೆ ಕಂಡಿದೆ.ಕೊರೊನಾ ಸೋಂಕಿಗೆ ಇಂದು ಇಬ್ಬರು ಮೃತಪಟ್ಟಿದೆ. 349 ಜನರಿಗೆ ಜಿಲ್ಲೆಯ ಕೋವಿಡ್ – 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಐಸಿಯುನಲ್ಲಿ 14 ಮಂದಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 864ಕ್ಕೆ ಏರಿಕೆಯಾಗಿದೆ. ಹಾಗೂ ಇಂದು ಶಿರಾ ನಗರದಲ್ಲಿ ಮೂರು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಒಂದು ಗ್ರಾಮಾಂತರ ಪ್ರದೇಶವನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ. ಸೀಲ್ ಡೌನ್ ಆಗಿರುವಂತಹ ಏರಿಯಾಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದ್ದು , ಅಕ್ಕಪಕ್ಕದ ಮನೆಯವರಿಗೆ ಜಾಗೃತೆಯಿಂದ ಇರಲು ಎಚ್ಚರಿಕೆಯನ್ನು ನೀಡಲಾಗಿದೆ.
ಎಕ್ಸ್ ಪ್ರೆಸ್ ನ್ಯೂಸ್ ಶ್ರೀಮಂತ್ ಕುಮಾರ್ ಶಿರಾ

Please follow and like us:

Related posts

Leave a Comment