ಈ ಒಂದು ಆಸ್ಪತ್ರೆಯಲ್ಲಿ ಸೋಂಕಿತರಿಗೆ ನಿಲ್ಲದ ನರಕಯಾತನೆ..?

ಆನೆಕಲ್: ಆಕ್ಸ್ ಫರ್ಡ್ ಆಸ್ಪತ್ರೆಯಲ್ಲಿ ಕೊರೊನ ಸೋಂಕಿತರ ಪಾಡು ಹೇಳತೀರಾದ್ದಾಗಿದೆ. ಚಿಕಿತ್ಸೆಗೆಂದು ಸೋಂಕಿತರು ಆಸ್ಪತ್ರೆಗೆ ದಾಖಲಾದರೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲಾ, ಸ್ವಚ್ಚತೆಯಂತು ಮೊದಲೇ ಇಲ್ಲವಂತೆ,ಈ ಆಸ್ಪತ್ರೆಯಲ್ಲಿ ಸುಮಾರು 500ಕ್ಕೂ ಅಧಿಕ ಸೋಂಕಿತರಿದ್ದು ಬರೀ 5ರಿಂದ6 ಬಾತ್ರೂಮ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯಂತೆ. ಎಲ್ಲಿ ನೊಡುದ್ರು ಗಬ್ಬು ನಾರುತ್ತಿರುವ ಬಾತ್ರೂಮ್ ಗಳು ,ಅಕ್ಕಪಕ್ಕದಲ್ಲಿಯೇ ಬಿದ್ದಿರುವ ಕಸದ ರಾಶಿ, ಇದನ್ನೆಲ್ಲಾ ನೊಡುದ್ರೆ ನಮಗೆ ತಕ್ಷಣ ನೆನಪಾಗೊದು ಕೆ.ಆರ್ ಮಾರುಕಟ್ಟೆ ಅಲ್ವಾ .ಇಂತಹ ದುಸ್ಥೀತಿ ಕಣ್ಣ ಮುಂದೆ ಇದ್ದರು ಆಸ್ಪತ್ರೆಯ ಸಿಬ್ಬಂದಿಗಳು ಮಾತ್ರ ಯಾವುದಕ್ಕೂ ಕ್ಯಾರೆ ಅನ್ನದೇ ಇರೊದು ಆಶ್ಚರ್ಯವೇನಿಸೊದು ಸತ್ಯ…ಇಲ್ಲಿರುವ ರೋಗಿಗಳಿಗೆ ಈ ಅವ್ಯವಸ್ಥೆ ಕೊರೊನಾಗಿಂತ ಭೀಕರತೆ ಅನ್ನಿಸಿದ್ದು ದಿನ ಕಳೆಯುವುದಕ್ಕೆ ಪರದಾಡುತ್ತಿದ್ದಾರೆ..ಕೊರೊನಗಿಂತ ಇಲ್ಲಿನ ನರಕಯಾತನೆ ದೊಡ್ಡದಾಗಿದೆ. ಇಂತಹ ಸ್ಥಿತಿಯಲ್ಲಿ ದಿನ ಕಳೆಯುವುದೇ ಕಷ್ಟವಾಗಿದೆ ಎಂದು ಸೋಂಕಿತ ವ್ಯಕ್ತಿ ಮೊಬೈಲ್ ವಿಡೀಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ

Please follow and like us:

Related posts

Leave a Comment