ರಾಯಚೂರಿನಲ್ಲಿ ಕೊರೊನಾ ರಣಕೇಕೆ..!

ರಾಯಚೂರು : ಕೊರೋನಾ ರಣಕೇಕೆ ರಾಯಚೂರಿನಲ್ಲಿ ಮುಂದುವರೆದಿದ್ದು, ಇಂದು ಮತ್ತೆ 266 ಹೊಸಾ ಪ್ರಕರಣ ದೃಢವಾಗಿದ್ದು, ರಾಯಚೂರು ತಾಲ್ಲೂಕಿನಲ್ಲೆ 137 ಪ್ರಕರಣಗಳು ಪತ್ತೆಯಾಗಿವೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆಯಷ್ಟೇ ಶತಕದಷ್ಟಿದ್ದ ಸೋಂಕಿತರ ಸಂಖ್ಯೆ ಇಂದು ದ್ವಿಶತಕಕ್ಕೆ ಏರಿದೆ. ರಾಯಚೂರು ನಗರದಲ್ಲೇ ಸೋಂಕು ಹೆಚ್ಚುತ್ತಿರುವುದು ನಿಜಕ್ಕೂ ಆತಂಕದ ವಿಷಯವೇ ಸರಿ. ನಿನ್ನೆಯ ವರದಿಯಲ್ಲಿ 135 ಸೋಂಕಿನಲ್ಲಿ 90 ರಷ್ಟು ನಗರ ಪ್ರದೇಶದ್ದಾಗಿತ್ತು. ಇಂದಿನ 267 ರಲ್ಲಿ 137 ಸೋಂಕಿತರು ರಾಯಚೂರು ತಾಲ್ಲೂಕಿನವರೇ ಆಗಿದ್ದಾರೆ. ಇನ್ನೂ ತಪಾಸಣೆ ಮಾಡಿದ 1136 ಮಾದರಿಗಳಲ್ಲಿ 266 ಜನರಿಗೆ ಸೋಕು ದೃಢವಾಗಿದೆ. ರಾಯಚೂರು ತಾಲ್ಲೂಕು ಒಂದರಲ್ಲೇ 137 ಸೋಂಕಿತರು ಪತ್ತೆಯಾದರೇ, ಉಳಿದಂತೆ ಮಾನ್ವಿ – 43, ಸಿಂಧನೂರು – 47, ಲಿಂಗಸುಗೂರು – 33, ದೇವದುರ್ಗ ತಾಲ್ಲೂಕಿನಲ್ಲಿ – 6 ಪ್ರಕರಣ ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1311 ಕ್ಕೆ ಏರಿಕೆಯಾಗಿದೆ.

Please follow and like us:

Related posts

Leave a Comment