ನೀವು ಮೀಟರ್ ಬಡ್ಡಿ ದಂಧೆ ಮಾಡ್ತಿದ್ದಿರಾ ? ಹಾಗಾದ್ರೆ ಹುಷಾರ್..!

ಬೆಂಗಳೂರು: ಜನರು ಕಷ್ಟ ಅಂದಕ್ಷಣ ಬಡ್ಡಿ ಎಷ್ಟೇ ಆದ್ರೂ ಪರವಾಗಿಲ್ಲ ದುಡ್ಡು ಸಿಕ್ಕರೆ ಸಾಕಾಪ್ಪ ಅಂತಾ ಬಡ್ಡಿಗೆ ದುಡ್ಡು ತೆಗೆದುಕೊಂಡು ಆ ಕ್ಷಣಕ್ಕೆ ತಮ್ಮ ಕಷ್ಟವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ಆದ್ರೆ ತಿಂಗಳಾಯ್ತು ಅಂದ್ರೆ ದುಡ್ಡು ಕೊಟ್ಟೊರು ಮನೆಮುಂದೆ ಬಂದು ನಿಂತಾಗ ಮರ್ಯಾದೆಗೆ ಅಂಜಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕಾಗಿ ಸರ್ಕಾರ ಮೀಟರ್ ಬಡ್ಡಿ ದಂಧೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಆದೇಶಿಸಿತ್ತು. ಕದ್ದುಮುಚ್ಚಿ ಬಡ್ಡಿ ಹೆಸರಿನಲ್ಲಿ ದುಡ್ಡು ಕೊಟ್ಟು ಹಿಂಸೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಆದ್ರೆ ದುಡ್ಡಿನ ಆಸೆ ಬುರುಕರು ಮಾತ್ರ ಇನ್ನು ಈ ದಂಧೆಯನ್ನು ನಿಲ್ಲಿಸಿಲ್ಲ, ಕಾನೂನಿನ ಕಣ್ಣಿಗೆ ಮಣ್ಣು ಎರೆಚಿ ಈ ದಂದೆಯನ್ನು ಕರಗತ ಮಾಡಿಕೊಂಡಿದ್ದ ವ್ಯಕ್ತಿ ವಿವಿ ಪುರಂನ ಬಾಬುಲಾಲ್ ಜೈನ್ ಮನೆ ಮತ್ತು ಕಛೇರಿ ಮೇಲೆ ಸಿಸಿಬಿ ದಾಳಿ ನಡೆಸಿದೆ. ಆಸ್ತಿ ಪತ್ರ ಇಟ್ಟುಕೊಂಡು ಮೀಟರ್ ಬಡ್ಡಿಗೆ 10% ರಿಂದ 20% ಬಡ್ಡಿಗೆ ನೂರಾರು ಕೋಟಿ ರೂಪಾಯಿಯನ್ನು ಸಾಲವಾಗಿ ಕೊಡುತ್ತಿದ್ದ. ಬಾಬುಲಾಲ್ ಜೈನ್ ವಿರುದ್ಧ ಆರೋಪದ ಮಾಹಿತಿ ಹಿನ್ನೆಲೆ ರೇಡ್ ನಡೆಸಿದ್ದು ಅಪಾರ ಪ್ರಮಾಣದ ಬ್ಲಾಂಕ್ ಚೆಕ್ ಗಳು, ಆಸ್ತಿ ಪತ್ರಗಳು ಸಿಕ್ಕಿದ್ದು ಪೋಲಿಸರು ಆರೋಪಿಯನ್ನು ಬಂಧಿಸಿ ತನಿಖೆ ಪ್ರಾರಂಭಿಸಿದ್ದಾರೆ.

Please follow and like us:

Related posts

Leave a Comment