ಒಂದೇ ದಿನದಲ್ಲಿ ಪಾಸಿಟೀವ್ ಇದ್ದ ಕೇಸ್ ನೆಗೆಟೀವ್ ಅಂತೆ..ಏನೀದು ಅಧಿಕಾರಿಗಳ ಯಡವಟ್ಟು..?

ಲಿಂಗಸೂಗೂರು: ಕಳೆದ 15 ದಿನಗಳ ಹಿಂದೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಬುಧವಾರ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಅಧಿಕಾರಿಗಳು ಆಕೆಯನ್ನು ಕರೆದುಕೊಂಡು ಹೋಗಿ ಕರಡಕಲ್ ಗ್ರಾಮದ ಹೊರವಲಯದಲ್ಲಿರುವ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಪಟ್ಟಣದ ಜೆಸ್ಕಾಂ ಕಚೇರಿ ಎದುರು, ಹಳೇ ಬಸ್ಟಾಂಡ್ ನಲ್ಲಿರುವ ಹಣ್ಣಿನ ವ್ಯಾಪಾರಿ ಸೇರಿ ಮೂವರನ್ನು ಅಧಿಕಾರಿಗಳು ಪಾಸಿಟಿವ್ ಇದೆ ಎಂದು ಹೇಳಿ ಕರೆದುಕೊಂಡು ಹೋಗಿದ್ದರು. ಬುಧವಾರ ಜುಲೈ 22ಕ್ಕೆ ಕರೆದುಕೊಂಡು ಹೋಗಿ, ಗುರುವಾರ ಜುಲೈ 23ಕ್ಕೆ ನಿಮಗೇನು ಸಮಸ್ಯೆ ಇಲ್ಲ. ಮನೆಯಲ್ಲೇ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.ಒಂದೇ ದಿನಕ್ಕೆ ಪಾಸಿಟಿವ್ ಇದ್ದ ವರದಿ ನೆಗೆಟಿವ್ ಆಗಲು ಹೇಗೆ ಸಾಧ್ಯವೇನ್ನುವುದು ಬಡ ವ್ಯಾಪಾರಿಗಳ ಪ್ರಶ್ನೆಯಾಗಿದ್ದು ಇದು ಸಾರ್ವಜನಿಕರಲ್ಲಿ ಅಸಮಧಾನ ಮೂಡಲು ಕಾರಣವಾಗಿದೆ.
ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Please follow and like us:

Related posts

Leave a Comment