ಜಲಪಾತ ವೀಕ್ಷಿಸಲು ಹೋಗಿ ನೀರುಪಾಲಾದ ತಂದೆ-ಮಗ..!

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊಲಪಲ್ಲಿ ಹತ್ತಿರವಿರುವ ಗುಂಡಲಬಂಡಾ ಜಲಾಪಾತ ವೀಕ್ಷಿಸಲು ದೇವದುರ್ಗ ತಾಲೂಕಿನ ಮೂಡಲಗುಂಡಾ ನಿವಾಸಿಗಳಾದ ನಾಲ್ವರು ನಿನ್ನೆ ಬೆಳಿಗ್ಗೆ 10ಗಂಟೆಗೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ನಂತರ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಈಜಲು ನದಿಗೆ ಇಳಿದಿದ್ದು ಸ್ವಲ್ಪ ಸಮಯದ ನಂತರ ನೀರಿನ ರಭಸ ಹೆಚ್ಚಾಗಿದೆ. ಗಾಬರಿಗೊಂಡು ನೀರಿನಲ್ಲಿಯೇ ಇದ್ದಂತಹ ಮಹಾಂತೇಶ್ ಹಾಗೂ ಸಿದ್ದಣ್ಣ ಸ್ಥಳೀಯರ ನೆರವಿನೊಂದಿಗೆ ಈಜಿ ದಡ ಸೇರಿದ್ದಾರೆ. ಇನ್ನೂ 35 ವರ್ಷದ ತಂದೆ-ಕೃಷ್ಣ ಹಾಗೂ 6 ವರ್ಷದ ಮಗ ಧನುಷ್ ರಭಸದಿಂದ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಲಿಂಗಸೂಗೂರು ಡಿವೈಎಸ್ಪಿ,ಸಿಪಿಐ,ಪಿಎಸ್ಐ ಅಗ್ನಿಶಾಮಕ ಸಿಬ್ಬಂದಿಗಳು ನಿನ್ನೆಯಿಂದ ಶೋಧ ಕಾರ್ಯ ಮುಂದುವರೆಸಿದ್ದರು. ನೀರಿನಲ್ಲಿ ಕೊಚ್ಚಿಹೋಗಿದ್ದ ಕೃಷ್ಣ ಹಾಗೂ ಧನುಷ್ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿದ್ದು, ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Related posts

Leave a Comment