ಕಾಡಿನಿಂದ ನಾಡಿಗೆ ಬಂದು ಜೀವ ಕಳೆದುಕೊಂಡ ಮೂಖ ಪ್ರಾಣಿ…!

ಕೋಲಾರ: ವಸತಿ ಪ್ರದೇಶಕ್ಕೆ ದಾರಿ ತಪ್ಪಿ ಬಂದ ಮುಗ್ದ ಪಂಗೋಲಿಯನ್ ಕಿಡಿಗೇಡಿಗಳಿಂದ ಹತ್ಯೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದಾದ್ಯಂತ ಕಳೆದ ವಾರ ಜಡಿ ಮಳೆ ಸುರಿದಿದ್ದು, ರಾತ್ರಿ 10 ಗಂಟೆ ವೇಳೆಯಲ್ಲಿ ಅಂತರಗಂಗೆ ಬೆಟ್ಟದಿಂದ ಭಾರಿ ಗಾತ್ರದ ಪಂಗೋಲಿಯನ್ ತಪ್ಪಲಿನಲ್ಲಿರುವ ಷಹಿನ್ ಷಾ ನಗರಕ್ಕೆ ದಿಕ್ಕು ತಪ್ಪಿ ಬಂದಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ದುಷ್ಟರು ಪಂಗೋಲಿಯನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವಿಕೃತಿ ಮೆರೆದಿದ್ದಾರೆ. ಪೆಂಗೋಲಿಯನ್ ಮೃತ ದೇಹವನ್ನು ಕಬ್ಬಿಣದ ಹಾರೆಗೆ ಸಿಕ್ಕಿಸಿಕೊಂಡು ಕಿಡಿಗೇಡಿಗಳು ಮೆರವಣಿಗೆ ನಡೆಸಿ ವಿಕೃತಿ ಮೆರೆದಿರುವ ವಿಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಪಂಗೋಲಿಯನ್ ಹತ್ಯೆಗೈದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲು ಅರಣ್ಯ ಇಲಾಖೆ ಮುಂದಾಗಿದೆ

Please follow and like us:

Related posts

Leave a Comment