ಗಬ್ಬು ನಾರುತ್ತಿರುವ ಸಗರ ಮಾರುಕಟ್ಟೆ : ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ.

ಶಹಾಪುರ: ಶಹಪೂರ ತಾಲ್ಲೂಕಿನ ಸಗರ ಗ್ರಾಮದ ಬಜಾರದ ಮುಖ್ಯ ರಸ್ತೆ ಕಸದ ರಾಶಿಯಿಂದ ತುಂಬಿದೆ. ಇಲ್ಲಿಯ ಜನರು ಜನರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಎದುರಾಗಿದ್ದು ಕಸದ ಜೊತೆಗೆ ಹಂದಿಗಳ ಹಾವಳಿ ಕೂಡ ಹೆಚ್ಚಾಗಿದೆಯಂತೆ. ಹಂದಿಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮದ ಜನರು ಬದುಕುವಂತಾಗಿದೆ. ಮಳೆಯ ಸಮಯದಲ್ಲಿ ತಿಪ್ಪೆಗುಂಡಿಗಳು ಜಾರಿ ರಸ್ತೆಗೆ ಬಂದರೂ ಪಿಡಿಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ಜಾಣ ಕುರುಡನಂತೆ ವರ್ತಿಸುತ್ತಿದ್ದಾರೆ, ಇದರ ಬಗ್ಗೆ ಹಲವಾರು ಬಾರಿ ಗಮನಕ್ಕೆ ತಂದರೂ ಕ್ಯಾರೇ ಎನ್ನದೆ ನಿರ್ಲಕ್ಷ್ಯ ವಹಿಸಿದ್ದಾರೆ.ರಾತ್ರಿಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು,ಡೆಂಗ್ಯೂ, ಮಲೇರಿಯಾ, ಹಾಗೂ ಇನ್ನಿತರ ಭಯಾನಕ ರೋಗಗಳಿಗೆ ಗ್ರಾಮದ ಜನತೆ ತುತ್ತಾಗುವಭಯದಲ್ಲಿ ಜೀವನ ನಡೆಸುತ್ತಿದ್ದಾರೆ.. ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿಗಳು ಖರ್ಚು ಮಾಡುತ್ತಿದೆ,ಈ ಗ್ರಾಮದಲ್ಲಿ ಮಾತ್ರ ದಾಖಲೆಗಳಲ್ಲಿ ಅಷ್ಟೇ ಅಭಿವೃದ್ಧಿ ಕಾಣಬಹುದು, ಅಭಿವೃದ್ಧಿಗಾಗಿ ಹರಿದು ಬಂದ ಕೋಟ್ಯಂತರ ರೂಪಾಯಿ ಎಲ್ಲಿಗೆ ಹೋಯಿತು ಎಂಬುದು ಸಗರ ಗ್ರಾಮದ ಜನರ ಯಕ್ಷ ಪ್ರಶ್ನೆಯಾಗಿದ್ದು, ಸಂಭಂದಪಟ್ಟಂತಹ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗ್ರಾಮದ ನೈರ್ಮಲ್ಯ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ಸ್ ಟಿವಿ

Please follow and like us:

Related posts

Leave a Comment