“ಶಿರಾ” ಗೆ ತಪ್ಪದ ತಲೆನೋವು…!

ಶಿರಾ:-ಶಿರಾ ತಾಲ್ಲೂಕಿನಲ್ಲಿ ಕಳೆದ ವಾರ ಎಟಿಎಂನಲ್ಲಿ ಹಣ ಕಳವಾಗಿದ್ದು, ದಿನೇ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗ್ತೀರುವ ಶಿರಾದಲ್ಲಿ ಈಗ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಕೆಲ ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿಯ ಶವ ಕೂಳೆತ ರೀತಿಯಲ್ಲಿ ಶಿರಾ ತಾಲ್ಲೂಕಿನ ಮಂಗನಹಳ್ಳಿಯಲ್ಲಿ ಪತ್ತೆಯಾಗಿದೆ. ಗ್ರಾಮದ 40 ವರ್ಷದ ಮಹಾಲಿಂಗಪ್ಪ ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದು,ಪೋಲಿಸರಿಗೆ ದೂರು ನೀಡಲಾಗಿತ್ತು ದೂರಿನ ಆಧಾರದ ಮೇಲೆ ವ್ಯಕ್ತಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾಗ ಗ್ರಾಮದಲ್ಲಿದ್ದಂತಹ ವಿದ್ಯುತ್ ಕಂಬದ ಕೆಳಗೆ ಮೃತ ದೇಹ ಪತ್ತೆಯಾಗಿದೆ, ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಶ್ರೀಮಂತ್ ಎಕ್ಸ್ ಪ್ರೆಸ್ಸ್ ಟಿವಿ ಶಿರಾ

Please follow and like us:

Related posts

Leave a Comment