ಪೂನಂ ಪಾಂಡೆ ಎಂಗೇಜ್…ಇವರೇ ನೋಡಿ ಹುಡುಗ..!!

ಪೂನಂ ಪಾಂಡೆ ಎಂಗೇಜ್…ಇವರೇ ನೋಡಿ ಹುಡುಗ..!!
ಹಾಟ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದ ಮಾದಕ ನಟಿ ಪೂನಂ ಪಾಂಡೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಗ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ಈಗ ಎಂಗೇಜ್ ಆಗಿರುವ ಫೋಟೋ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಪೂನಂಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.ಅಂದ್ಹಾಗೆ ಪೂನಂ ದೀರ್ಘ ಕಾಲದ ಗೆಳೆಯ ಸ್ಯಾಮ್ ಬಾಂಬೆ ಜೊತೆ ಎಂಗೇಜ್ ಆಗಿದ್ದಾರೆ. ಕೊನೆಗೊ ಎಂಗೇಜ್ ಆದೆವು ಎಂದು ಗೆಳೆಯ ಸ್ಯಾಮ್ ಬಾಂಬೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಬೆರಳಿಗೆ ಉಂಗುರ ಹಾಕಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಭಾವಿ ಪತಿಯ ಪೋಸ್ಟ್ ಗೆ ಪೂನಂ ಪಾಂಡೆ ‘ಬೆಸ್ಟ್ ಫೀಲಿಂಗ್’ ಎಂದು ಬರೆದುಕೊಂಡಿದ್ದಾರೆ. ಪೂನಂ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುವ ಜೊತೆಗೆ, ‘ದೊಡ್ಡ ನಿರ್ಧಾರಕ್ಕೆ, ದೊಡ್ಡ ಅಭಿನಂದನೆಗಳು’ ಎನ್ನುತ್ತಿದ್ದಾರೆ. ಇನ್ನೂ ಕೆಲವರು ‘ಪೂನಂನ ಪಡೆದ ಸ್ಯಾಮ್ ಬಾಂಬೆ ತುಂಬಾ ಅದೃಷ್ಟವಂತ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಶ್ವಿನಿ ಭಟ್ಟ್ ಎಕ್ಸ್ ಪ್ರೆಸ್ಸ್ ಟಿವಿ ಬೆಂಗಳೂರು

Please follow and like us:

Related posts

Leave a Comment