ನಾಗಮಂಗಲ ಪುರಸಭೆ ಕಂಪ್ಲೀಟ್ ಸೀಲ್ ಡೌನ್.!

ನಾಗಮಂಗಲ: ದಿನದಿಂದ ದಿನಕ್ಕೆ ತನ್ನ ಹಾವಳಿಯನ್ನು ಮುಂದುವರೆಸುತ್ತಿರುವ ಕೊರೊನಾ ಸೋಂಕಿಗೆ ಜನರು ತತ್ತರಿಸಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಸೋಂಕು ಪತ್ತೆಯಾಗಿದ್ದು, ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ಪುರಸಭೆ ಮತ್ತು ತಾಲ್ಲೂಕಿನ ಪಟ್ಟನ ಪಂಚಾಯ್ತಿಗಳನ್ನು ಸೀಲ್ ಡೌನ್ ಮಾಡಲಾಗಿದೆ.ಪುರಸಭೆಯ ಕೆಲ ಸಿಬ್ಬಂದಿಗಳು ಅನಾರೋಗ್ಯದಿಂದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಎಲ್ಲಾ ನೌಕರರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತ್ತು. ನಂತರ 8 ಜನರಿಗೆ ಕೊರೊನಾ ಪಾಸಿಟೀವ್ ಇರುವುದು ಪತ್ತೆಯಾಗಿದೆ. ಕೋವಿಡ್ ಪತ್ತೆಯಾಗಿರುವ 08 ಜನ ಸಿಬ್ಬಂದಿಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಲಾಗಿದೆ. ಕೊರೊನಾ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ ತಿಳಿಸಿದರು. ಇನ್ನೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಚೇರಿಯಿಂದ ಹೊರಗುಳಿದೇ ಕರ್ತವ್ಯ ನಿರ್ವಾಹಿಸಲಾಗುವುದು. ನಾಗರೀಕರಿಗೆ ಕುಡಿಯುವ ನೀರು, ರಸ್ತೆ ದೀಪ ನಿರ್ವಾಹಣೆ ಹಾಗೂ ಸ್ವಚ್ಚತೆ ಸೇರಿದಂತೆ ಮತ್ತಿತರ ಯಾವುದೇ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ

Please follow and like us:

Related posts

Leave a Comment