ಕೊರೋನಾ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿದ ರಮೇಶ್ ಅರವಿಂದ್..!

ಕೊರೋನಾ ಎಂಬ ಒಂದು ಶಬ್ಧ ಕೇಳಿ ಭಯಪಡುವ ಮಂದಿಯೇ ಅಧಿಕವಾಗಿದ್ದಾರೆ. ಆದರೆ ಕೊರೋನಾ ಬಂತೆಂದು ಭಯಪಡದೇ ಎದುರಿಸುವುದೇ ಇದಕ್ಕಿರುವ ಒಳ್ಳೆಯ ಮದ್ದು. ಕೊರೋನಾ ಯಾವಾಗ ಅಪಾಯಕಾರಿ? ಯಾವಾಗ ಅಪಾಯಕಾರಿಯಲ್ಲ ಎಂಬ ವಿಚಾರದ ಬಗ್ಗೆ ಬಿಬಿಎಂಪಿಯ ಕೊರೋನಾ ಕುರಿತಾದ ಜಾಗೃತಿ ಮೂಡಿಸುವ ರಾಯಭಾರಿ ಆಗಿರುವ ನಟ ರಮೇಶ್ ಅರವಿಂದ್ ವಿಶೇಷ ವಿಡಿಯೋ ಮೂಲಕ ವಿವರಣೆ ನೀಡಿದ್ದಾರೆ. ಕೊರೋನಾವನ್ನು ವೈದ್ಯರು ಮೂರು ವಿಧವಾಗಿ ವಿಂಗಡಿಸಿದ್ದಾರೆ. ಮೊದಲನೆಯದಾಗಿ ನಿಮ್ಮ ರಕ್ತದಲ್ಲಿ ಆಕ್ಸಿಜನ್ ಲೆವೆಲ್ ನ್ನು ತಿಳಿಯಲು ಕೈಗೆ ಕ್ಲಿಪ್ ಥರಾ ಒಂದು ಸಾಧನವನ್ನು ವೈದ್ಯರು ಅಳವಡಿಸುತ್ತಾರೆ. ಒಂದು ವೇಳೆ ನಿಮ್ಮ ರಕ್ತದಲ್ಲಿ ಆಕ್ಸಿಜನ್ ಲೆವೆಲ್ 94 ಶೇಕಡಾಕ್ಕಿಂತ ಅಧಿಕವಾಗಿದ್ದರೆ ನಿಮ್ಮದು ಮೈಲ್ಡ್ ಕೊರೋನಾ ಎಂದರ್ಥ. ಹೆಚ್ಚಿನ ಪ್ರಕರಣಗಳೂ ಹೀಗೇ ಆಗಿರುತ್ತವೆ. ಇವರು ಖಂಡಿತಾ ಭಯಪಡಬೇಕಿಲ್ಲ. ಸಾಧಾರಣ ಕೆಮ್ಮು ಶೀತ ರೋಗದಂತೆ ಇದೂ ಗುಣವಾಗುತ್ತದೆ. ಆಕ್ಸಿಜನ್ ಲೆವೆಲ್ 74 ಶೇಕಡಾಕ್ಕಿಂತ ಕಡಿಮೆಯಿದ್ದರೆ ಮಾತ್ರ ಅಪಾಯ. ಇದೂ ಮಧುಮೇಹ, ರಕ್ತದೊತ್ತಡ ಇತ್ಯಾದಿ ಖಾಯಿಲೆ ಇರುವವರಿಗೆ ಮಾತ್ರ ಇಂತಹ ಸಮಸ್ಯೆ ಬರುವುದು. ಹೀಗಾಗಿ ಕೊರೋನಾ ಬಗ್ಗೆ ಭಯ ಬೇಕಾಗಿಲ್ಲ. ಧೈರ್ಯವಾಗಿ ಎದುರಿಸೋಣ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಅಶ್ವಿನಿ, ಎಕ್ಸ್ ಪ್ರೆಸ್ ಟಿವಿ, ಬೆಂಗಳೂರು

Please follow and like us:

Related posts

Leave a Comment