ಹೆಚ್ಚು ಸ್ಯಾನಿಟೈಸರ್ ಬಳಸಿದ್ರೆ ಅಪಾಯ..!!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ಯಾನಿಟೈಸರ್ ಸಹಾಯ ಮಾಡುತ್ತದೆ. ಬ್ಯಾಕ್ಟಿರಿಯಾ, ವೈರಸ್ ಕೊಲ್ಲುವುದರಲ್ಲಿ ಮಹತ್ವದ ಪಾತ್ರ ವಹಿಸುವತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಸ್ಯಾನಿಟೈಸರ್ ಹೆಚ್ಚು ಬಳಕೆಯಿಂದ ಉತ್ತಮ ಬ್ಯಾಕ್ಟೀರಿಯಾಗಳು ಸಾಯುತ್ತವೆ ಎಂದು ತಜ್ಞರು ಹೇಳಿದ್ದಾರೆ. ಪ್ರಮುಖವಾಗಿ ಹೆಚ್ಚು ಸ್ಯಾನಿಟೈಸರ್ ಬಳಸುವುದರಿಂದ, ಕೈಯಲ್ಲಿರುವ ಮಾನವನಿಗೆ ಸಹಾಯ ಮಾಡುವ ಬ್ಯಾಕ್ಟೀರಿಯಾಗಳು ಸಾಯಲಿವೆ. ಇದರಿಂದ ಕೈ ಉರಿ, ಒಣಗುವುದು, ಕೈ ಒಡೆಯುವ ಹಾಗೂ ಕೈ ಸೀಳಿನಿಂದ ರಕ್ತ ಬರುವ ಸಾಧ್ಯತೆಯಿದೆ. ಆದ್ದರಿಂದ ಅಗತ್ಯವಿರುವಷ್ಟು ಸ್ಯಾನಿಟೈಸರ್ ಬಳಸುವುದು ಸೂಕ್ತ ಎಂದು ಚರ್ಮರೋಗ ತಜ್ಞರು ಸಲಹೆ ನೀಡಿದ್ದಾರೆ.

ಅಶ್ವಿನಿ, ಎಕ್ಸ್ ಪ್ರೆಸ್ ಟಿವಿ, ಬೆಂಗಳೂರು.

Please follow and like us:

Related posts

Leave a Comment