ಅಂಧನ ಆಳಲಿಗೆ ಬೆಲೆ ಇಲ್ವಾ…?

ಪಾವಗಡ : ಪಾವಗಡ ನನಗೆ ಮನೆ ಮಂಜೂರು ಮಾಡಿಕೊಡಿ ಎಂದು ಕಳೆದ ಐದು ವರ್ಷಗಳಿಂದ ಕಛೇರಿಗೆ ಅಲೆಯುತ್ತಿದ್ದರೂ ಯಾವುದೇ ಅಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವ ಈ ದೃಶ್ಯ ನಮ್ಮ ವ್ಯವಸ್ಥೆ ನೋಡಿ ತಲೆ ತಗ್ಗಿಸುವಂತೆ ಮಾಡುತ್ತಿದೆ. ಹೀಗೆ ತಮ್ಮ ನೋವು ಹೇಳಿಕೊಳ್ಳುತ್ತಿರುವ ವ್ಯಕ್ತಿ ಅಂಧರಾಗಿದ್ದು, ಇವರು ಪಾವಗಡ ತಾಲ್ಲೂಕು ಕಸಬಾ ಹೋಬಳಿ ಕನ್ನಮೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲಾರ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಗಣೇಶ್ ಬಾಬು. ಇವರು ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ತಾನು ಕಳೆದ ಐದು ವರ್ಷಗಳಿಂದ ಮನೆ ಮಂಜೂರು ಮಾಡಿಕೊಡಿ ಎಂಬುದಾಗಿ ಕೇಳಿಕೊಳ್ಳುತ್ತಿದ್ದರೂ ಇಲ್ಲಿಯವರೆಗೂ ಆಡಳಿತ ವರ್ಗದವರಾಗಲ್ಲಿ ಜನಪ್ರತಿನಿಧಿಯಾಗಲಿ ಮೀನಮೇಷ ಎಣಿಸುತ್ತಿದ್ದಾರೆ. ತಮ್ಮ ಅಳಲು ತೋಡಿಕೊಳ್ಳುತ್ತಿರುವ ದೃಶ್ಯ ಎಂತಹವರ ಮನವನ್ನು ಕರಗುವಂತೆ ಮಾಡುತ್ತದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ಅಂಧನಿಗೆ ಮನೆ ಮಾಂಜೂರು ಮಾಡಿಕೊಡಿ ಎಂದು ಪ್ರಜ್ಞೆವಂತರ ಮನವಿಯಾಗಿದೆ.

ವರದಿ: ಇಮ್ರಾನ್ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment