ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಬೇಸತ್ತ ಗಣಿನಾಡು ಜನರು..!

ಬಳ್ಳಾರಿ: ರಾಜ್ಯದ ಮೂಲೆ ಮೂಲೆಗಳಲ್ಲಿ ವರುಣನ ಆರ್ಭಟ ಶುರುವಾಗಿದ್ದು, ಬಳ್ಳಾರಿ ನಗರವೂ ಇದಕ್ಕೆ ಹೊರತಾಗಿಲ್ಲ.ಮಳೆಗಾಲ ಶುರುವಾಯಿತೆಂದರೆ ಬಳ್ಳಾರಿಯ ಜನ ತತ್ತರಿಸಿ ಹೋಗುತ್ತಾರೆ. ಚರಂಡಿಗಳು ಎಲ್ಲೆಂದರಲ್ಲಿ ಮುಚ್ಚಿಹೋಗಿದ್ದು, ಮಳೆಯ ನೀರು ಸರಿಯಾಗಿ ಹರಿಯದೇ ಮನೆಗಳಿಗೆ ನೀರು ನುಗ್ಗುತ್ತಿದೆ. ಕೆಲವು ಏರಿಯಾಗಳಲ್ಲಿ ಜನರು ತಮ್ಮ ಮನೆಗಳನ್ನ ಬಿಟ್ಟು ಗಂಟು ಮೂಟೆಗಳೊಂದಿಗೆ ಬೇರೆ ಏರಿಯಾಗಳಿಗೆ ಹೋಗುತ್ತಿದ್ದಾರೆ.ಸಿಸಿ ರಸ್ತೆಗಳನ್ನು ಕಳಪೆ ಮಟ್ಟದಲ್ಲಿ ನಿರ್ಮಾಣ ಮಾಡಿದ್ದು, ಎಲ್ಲೆಂದರಲ್ಲಿ ಕಿತ್ತಿಹೋಗಿವೆ. ಬಳ್ಳಾರಿಯಲ್ಲಿ ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ನಗರದ ಅಭಿವೃದ್ಧಿ ಕಾರ್ಯಗಳಿಗೆ ಬರುವ ಹಣವನ್ನೆಲ್ಲಾ ಅಧಿಕಾರಿಗಳು ತಿಂದು ಹಾಕುತ್ತಿದ್ದಾರೆಂದು ಅಲ್ಲಿಯಾ ಜನರು ಬೇಸರ ವ್ಯಕ್ತಪಡಿಸಿದರು. ನಗರದ ವಿಶಾಲ್ ನಗರ ಹಾಗೂ ಹನುಮಾನ್ ನಗರಗಳಲ್ಲಿ ಮಳೆಯ ನೀರು ನಿಂತು ದುರ್ನಾತ ಬೀರುತ್ತಿದೆ. ಮಹಾನಗರ ಪಾಲಕೆಯ ಆಯುಕ್ತರಾಗಲೀ, ಶಾಸಕರಾಗಲೀ ಇದರ ಬಗ್ಗೆ ಗಮನ ಹರಿಸದಿರುವುದು ತುಂಬಾ ಬೇಸರದ ಸಂಗತಿ, ಗಣಿನಾಡು ಬಳ್ಳಾರಿ ಮಹಾನಗರ ಪಾಲಿಕೆಯ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ಆಡಳಿತದ ವಿರುದ್ದ ಪ್ರತಿಭಟನಕಾರರು ಪ್ರತಿಭಟನೆ ನಡೆಸಿ ಆದಷ್ಟು ಬೇಗ ಸಮಸ್ಯೆಯನ್ನು ನಿವಾರಿಸದಿದ್ದರೆ ಇನ್ನು ದೊಡ್ಡ ಮಟ್ಟಿಗೆ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಬಳ್ಳಾರಿ ನಾಗರಿಕರ ಹೋರಾಟ ಸಮಿತಿಯ ಸಂಚಾಲಕರಾದ ಸೋಮಶೇಖರ್ ಗೌಡರು ಹಾಗೂ ಡಾ.ಪ್ರಮೋದ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ವರದಿ- ವೆಂಕಟೇಶ್ ಎಕ್ಸ್ ಪ್ರೆಸ ಟಿವಿ ಬಳ್ಳಾರಿ

Please follow and like us:

Related posts

Leave a Comment