ರಾತ್ರೋ ರಾತ್ರಿ ಗ್ರಾಮಪಂಚಾಯಿತಿಗೆ ಕನ್ನ ಹಾಕಿದ ಖದೀಮರು..!

ತಿಪಟೂರು: ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಡರಾತ್ರಿ ದುಷ್ಕರ್ಮಿಗಳು ಕಚೇರಿಯ ಬೀಗ ಒಡೆದು ಕಳ್ಳತನ ಮಾಡಿದ ಘಟನೆ ತಡರಾತ್ರಿ ನಡೆದಿದ್ದು ಬೆಳಗಿನ ಜಾವ ಗಮನಕ್ಕೆ ಬಂದಿದೆ. ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು ಲಾಕರನ್ನು ಕಲ್ಲಿನಿಂದ ಒಡೆಯಲು ಯತ್ನಿಸಿದ್ದಾರೆ ಲಾಕರ್ ಓಪನ್ ಆಗದೆ ಇದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಕಳ್ಳರು ವಾಪಸ್ ಆದ ಘಟನೆ ನಡೆದಿದ್ದು, ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕೆಲ ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ ಇದ್ದರಿಂದ ಕಳ್ಳತನ ಮಾಡಲು ಯಾರು ಯತ್ನಿಸಿರಬಹುದು ಎಂಬುವುದು ಸ್ವಷ್ಟವಾಗಿಲ್ಲ. ಇನ್ನೂ ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವರದಿ- ಸಿದ್ದೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment