ಆಸ್ಪತ್ರೆಯಿಂದಲೇ ವಿಡಿಯೋ ಮಾಡಿದ ನಟಿ: ಹೇಳಿದ್ದು ಏನು ?

ಚೆನೈ: ಕಳೆದ ಎರಡು ದಿನಗಳ ಕೆಳಗೆ ಆತ್ಮಹತ್ಯೆಗೆ ಯತ್ನಿಸಿದ್ದ ಬಹುಭಾಷಾ ತಾರೆ ವಿಜಯಲಕ್ಷ್ಮಿ ಇದೀಗ ಆಸ್ಪತ್ರೆಯಲ್ಲಿ ಇದ್ದುಕೊಂಡೇ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ, ಅಭಿಮಾನಿಗಳ ಪ್ರೀತಿ ನನ್ನ ಉಳಿಸಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಸೀಮನ್. ಆದರೆ ಕೆಲವರು ಈಗ ನನ್ನನ್ನು ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದವಳು ಎಂದು ಹೇಳಿದ್ದಾರೆ. ದಯಮಾಡಿ ಇಂತಹ ಊಹಾಪೋಹಗಳನ್ನ ನಿಲ್ಲಿಸಿ ಎಂದು ವಿಡಿಯೋ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಹಲವು ಕಡೆಯಿಂದ ಅಭಿಮಾನಿಗಳು ನನ್ನ ಆರೋಗ್ಯ ವಿಚಾರಿಸಲು ಕರೆಗಳು ಮಾಡುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ಇನ್ನೊಬ್ಬರ ಜೀವನದಲ್ಲಿ ಯಾರು ಆಟ ಆಡಬೇಡಿ, ಯಾರು ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಲ್ಲ. ಆದಷ್ಟು ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರ್ತಿನಿ ಅಂತ ವಿಜಯಲಕ್ಷ್ಮಿ ತಿಳಿಸಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment