ನೊಡ-ನೋಡುತ್ತಿದ್ದಂತೆ ನೆಲಕ್ಕುರುಳೀದ ನಾಲ್ಕು ಅಂತಸ್ಥೀನ ಕಟ್ಟಡ..!

ಬೆಂಗಳೂರು: ನಗರದ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಬಳಿ ಇರುವ ಕಪಾಲಿ ಥಿಯೇಟರ್ ಹಿಂಬಾಗದ ಕಟ್ಟಡಗಳು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಪಾಲಿ ಥಿಯೇಟರ್ 2017 ರಲ್ಲಿ ತೆರವು ಮಾಡಲಾಗಿತ್ತು. ಆ ಜಾಗದಲ್ಲಿ ಬೃಹತ್ ಮಲ್ಟಿಪ್ಲೆಕ್ಸ್ ಕಟ್ಟಡ ನಿರ್ಮಾಣವಾಗುತ್ತಿತ್ತು. ಆದರೆ ದೇಶದಲ್ಲಿ ಲಾಕ್ಡೌನ್ ಜಾರಿಯಾದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬಂದಿದ್ದರಿಂದ ಮಣ್ಣು ಸಡಿಲಗೊಂಡ ಪರಿಣಾಮ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬೀಳುತ್ತಿದ್ದಂತೆ ಅದರ ಹಿಂದೆ ಇದ್ದ ಮೂರು ಅಂತಸ್ತಿನ ಕಟ್ಟಡ ಕೂಡ ಬಿರುಕು ಬಿಟ್ಟು ಈ ಎರಡೂ ಕಟ್ಟಡಗಳು ನೆಲಕ್ಕುರುಳಿವೆ.ಗೋಡೆಗಳಲ್ಲಿ ಬಿರುಕು ಕಂಡು ಬಂದ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಅಕ್ಕಪಕ್ಕದ ಪಿಜಿ ಮತ್ತು ಹೋಟೆಲ್ ಬಿಲ್ಡಿಂಗ್ ಖಾಲಿ ಮಾಡಿಸಲಾಗಿತ್ತು.ಸ್ಥಳಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment