ಬಂಗಾರಪೇಟೆ: ಕೋಲಾರದ ಬಂಗಾರಪೇಟೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನೂತನ ಸಮುದಾಯ ಭವನ ಬಿಟ್ಟುಕೊಡಲು ಜಿಲ್ಲಾ ಕಾಂಗ್ರೆಸ್ ಕೆ.ಚಂದ್ರಾರೆಡ್ಡಿ ಮನವಿ ಮಾಡಿದ್ದಾರೆ, ಬಂಗಾರಪೇಟೆ ತಾಲೂಕಿನಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ, ಹೀಗಾಗಿ ಬಂಗಾರಪೇಟೆ ಪಟ್ಟಣದ ಹೊರವಲಯದ ಬೆಂಗನೂರು ಬಳಿಯಿರುವ ಕೆಸಿಆರ್ ಸರಸ್ವತಿ ಕಲ್ಯಾಣ ಮಂಟಪವನ್ನು ಕೋವಿಡ್ ಕೇರ್ ಸೆಂಟರ್ ಗೆ ಬಿಟ್ಟುಕೊಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ.ಚಂದ್ರಾರೆಡ್ಡಿ ತಿಳಿಸಿದ್ದಾರೆ, ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿಗಳು ಒಪ್ಪಿದಲ್ಲಿ ಉಚಿತವಾಗಿ 50 ಬೆಡ್ ಖರೀದಿಸಿ, ಅಗತ್ಯ ಸಲಕರಣೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ, ನೂತನವಾಗಿ ನಿರ್ಮಾಣವಾಗಿರುವ ಕಲ್ಯಾಣ ಮಂಟಪದಲ್ಲಿ 15 ಕ್ಕೂ ಹೆಚ್ಚು ಶೌಚಾಲಯವಿದ್ದು 20 ಕ್ಕೂ ಹೆಚ್ಚು ಕೊಠಡಿ, ಮತ್ತು ಬೃಹತ್ತ್ ಹಾಲ್ ಕೂಡ ಹೊಂದಿದೆ, ಈ ಕುರಿತು ಮಾತನಾಡಿರೊ ಚಂದ್ರಾರೆಡ್ಡಿ ಸಮಾಜಸೇವೆ ಮಾಡುವ ದೃಷ್ಟಿಯಿಂದ ಸಮುದಾಯ ಭವನ ನೀಡಲು ಮುಂದಾಗಿದ್ದು ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.
ಕಲ್ಯಾಣ ಮಂಟಪವಾಯ್ತು ಕೋವಿಡ್ ಸೆಂಟರ್ ಕೇರ್..!

Please follow and like us: