ಭೂತದಂತೆ ಹಾರಿದ ಆಟೋ ಡ್ರೈವರ್ ವಿಡಿಯೋ ಪುಲ್ ವೈರಲ್..!

ಕೋಲಾರ: ಜೋತುಬಿದ್ದ ಕೇಬಲ್ಗೆ ಸಿಕ್ಕಿ ಭಯಾನಕವಾಗಿ ಹಾರಿ ಬೀಳುವ ಆಟೋ ಡ್ರೈವರ್ ನ ವಿಡಿಯೋ ಕೋಲಾರದ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಇನ್ನು ಘಟನೆಯಿಂದ ಮಹಿಳೆ ಸೇರಿ ಆಟೋ ಡ್ರೈವರ್ ಗೆ ಗಾಯಗಳಾಗಿದೆ. ಹಾರಾರ್ ಚಿತ್ರಗಳಲ್ಲಿ ಇದ್ದಕ್ಕಿದ್ದಂತೆ ಹಾರಿ ಬೀಳುವ ರೀತಿ ಆಟೋ ಡ್ರೈವರ್ ಹಾರಿ ಬೀಳುವ ಭಯಾನಕ, ಬೆಚ್ಚಿ ಬೀಳಿಸುವ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕೋಲಾರದ ಹೊರವಲಯದಲ್ಲಿನ ಕೊಂಡರಾಜನಹಳ್ಳಿ ಬಳಿ ಘಟನೆ ನಡೆದಿದೆ. ಕೆಟ್ಟು ನಿಂತಿದ್ದ ಆಟೋವನ್ನು ಚಾಲಕ ತಳ್ಳುವ ವೇಳೆ ರಸ್ತೆಯಲ್ಲಿ ಜೋತು ಬಿದ್ದಿದ್ದ ಕೇಬಲ್ ವೈರ್ ಕಾಲಿಗೆ ಸಿಕ್ಕಿ ನಡೆದು ಕೊಂಡು ಹೋಗುತ್ತಿದ್ದ ಮಹಿಳೆ ಮೆಲೆ ಬೀಳುತ್ತಾನೆ. ರಸ್ತೆಯಲ್ಲಿ ಜೋತು ಬಿದ್ದಿರುವ ಕೇಬಲ್ ಮೇಲೆ ಕಾರು ಚಲಿಸಿದ ಪರಿಣಾಮ ಕೇಬಲ್ ವೈರ್ ಡ್ರೈವರ್ ಕಾಲಿಗೆ ಸಿಲುಕಿ ಹಕ್ಕಿಯಂತೆ ಹಾರಿ ಬಿದ್ದಿದ್ದಾರೆ. ಇನ್ನೂ ಮಹಿಳೆ ಹಾಗೂ ಆಟೋ ಡ್ರೈವರ್ಗೆ ಗಾಯಗಳಾಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

Please follow and like us:

Related posts

Leave a Comment