ಕೊರೊನಾ ಮುಕ್ತ ನಗರ ಮಳವಳ್ಳಿಯಲ್ಲಿ ಮತ್ತೆ ಕೊರೊನಾ ಆರ್ಭಟ ಶುರು..!

ಮಂಡ್ಯ:ಮಳವಳ್ಳಿಯಲ್ಲಿ ಇಂದು ಸಹ ಕೊರೊನಾ ಆರ್ಭಟ ಮುಂದುವರೆದಿದ್ದು,ಮಳವಳ್ಳಿ ಪಟ್ಟಣ ಸೇರಿದಂತೆ 8 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.ಮಳವಳ್ಳಿ ಪಟ್ಟಣದ. ಕೆಎಸ್ ಆರ್ ಟಿಸಿ ನೌಕರನಿಗೆ, ಗಂಗಾಮತ ಬೀದಿಯಲ್ಲಿ-1, ಸುಲ್ತಾನ್ ರಸ್ತೆಯಲ್ಲಿ-1, ಎನ್ ಇ ಎಸ್ ಬಡಾವಣೆಯಲ್ಲಿ-1,ಮಳವಳ್ಳಿ ಪಟ್ಟಣದಲ್ಲಿ 4 ಮಂದಿಗೆ,ಮಳವಳ್ಳಿ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ-2, ಬಾಳೆಹೊನ್ನಿಗ ಗ್ರಾಮದಲ್ಲಿ-1 ಸೋಂಕು ಪತ್ತೆಯಾಗಿದೆ.ಮಳವಳ್ಳಿ ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಪ್ರತಿ ದಿನವೂ ಕೋರೋನಾ ಆರ್ಭಟ ಮುಂದುವರಿದ್ದು.ಇದುವರೆಗೂ 185 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು,90 ಮಂದಿ ಗುಣಮುಖರಾಗಿದ್ದಾರೆ.ಕೊರೊನಾ ಮುಕ್ತವಾಗಿದ್ದ ಮಳವಳ್ಳಿ ಪಟ್ಟಣದ ಬೀದಿ ಬೀದಿಯಲ್ಲೂ ಕೊರೊನಾ ಆರ್ಭಟ ಮುಂದುವರೆದಿರುವುದು ತಾಲ್ಲೂಕು ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ವರದಿ :ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment