ಸರ್ಕಾರದ ಕ್ರಷರ್ ಕಾಯ್ದೆ ತಿದ್ದುಪಡಿಗೆ ಲಾರಿ ಮಾಲೀಕರ ತೀವ್ರ ವಿರೋಧ..!

ಆನೇಕಲ್ : ಅತ್ತಿಬೆಲೆಯಲ್ಲಿ ಕರ್ನಾಟಕ ಟಿಪ್ಪರ್ ಲಾರಿ ಮಾಲೀಕರ ಸಂಘದಿಂದ ಸರ್ಕಾರದ ಕ್ರಷರ್ ಕಾಯ್ದೆ ತಿದ್ದುಪಡಿಗೆ ವಿರೋಧ ಪಡಿಸುತ್ತಿದ್ದು, ವಾಹನ ನಿಯಂತ್ರಣ ಕಾಯ್ದೆ ಹೆಸರಲ್ಲಿ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಎರಡು ಕಡೆ ಹಣ ಕಟ್ಟಬೇಕು. ತಮಿಳುನಾಡಿನಿಂದ ಕರ್ನಾಟಕದ ಕಡೆ ಬರುವ ಲಾರಿಗಳನ್ನು ತಡೆದು ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿಗಳು ಶುಲ್ಕ ವಸೂಲಿ ಮಾಡುತ್ತಿದ್ದಾರೆ.ತಮಿಳುನಾಡಿನಲ್ಲಿ ರಾಯಲ್ಟಿ ಹಾಗೂ ಜಿಎಸ್ಟಿ ನೀಡಿ ಮತ್ತೆ ರಾಜ್ಯಕ್ಕೆ ಬರುವಾಗ ಹೆಚ್ಚುವರಿ ಶುಲ್ಕ ನೀಡಬೇಕು ಈ ಶುಲ್ಕದಿಂದ ಲಾರಿ ಮಾಲೀಕರಿಗೆ ಹೆಚ್ಚುವರಿಯಾಗಿ ನಷ್ಟವಾಗುತ್ತಿದೆ.ಡಿಸೆಲ್ ಬೆಲೆ ಏರಿಕೆ ಬೆನ್ನಲ್ಲೆ ಈ ಶುಲ್ಕದಿಂದ ಟಿಪ್ಪರ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಯಾವುದೇ ಸೂಚನೆ ನೀಡದೆ ಕಾಯ್ದೆಗೆ ತಿದ್ದುಪಡಿ ಸರಿಯಲ್ಲ, ಸರ್ಕಾರ ಸುಗ್ರಿವಾಜ್ಞೆಯನ್ನ ವಾಪಸ್ ಪಡೆಯಬೇಕು ಆಗಸ್ಟ್ 12ರವರೆಗೆ ಟಿಪ್ಪರ್ ಲಾರಿಗಳನ್ನು ಬಂದ್ ಮಾಡಿ ಮಾಲೀಕರೆಲ್ಲಾ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಲಾರಿ ಮಾಲೀಕರ ಸಂಘ ಆಗ್ರಹಿಸಿದೆ.

Please follow and like us:

Related posts

Leave a Comment