ಆಧುನಿಕ ಭಗೀರಥ ನಿರ್ಮಿಸಿರುವ ಕೆರೆ, ಪ್ರವಾಸಿಗರ ವೀಕ್ಷಣೆಯ ಸ್ಥಳವಾಗಿ ಮಾರ್ಪಾಡು..!

ಮಂಡ್ಯ: ಪ್ರಧಾನಿ ಮೋದಿರವರು ಮನ್ ಕೀ ಬಾತ್ ನಲ್ಲಿ ಆದುನಿಕ ಭಗೀರಥ ಕಲ್ಮನೆ ಕಾಮೇಗೌಡರನ್ನು ಪ್ರಶಂಸೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ದಾಸನದೊಡ್ಡಿ ಕಾಮೇಗೌಡರು ನಿರ್ಮಿಸಿರುವ ಕೆರೆ-ಕಟ್ಟೆಗಳ ಸ್ಥಳ ಪ್ರವಾಸಿಗರ ವೀಕ್ಷಣೆ ಸ್ಥಳವಾಗಿ ಮಾರ್ಪಾಡಾಗುತ್ತಿದೆ. ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದಲ್ಲಿರುವ ಕುಂದನಿ ಬೆಟ್ಟದ ತಪ್ಪಲಿನಲ್ಲಿ ಕಲ್ಮನೆ ಕಾಮೇಗೌಡರು 16 ಕೆರೆ-ಕಟ್ಟೆ ನಿರ್ಮಿಸಿದ್ದು , ಈ ಸ್ಥಳವನ್ನು ಕುತೂಹಲದಿಂದ ವೀಕ್ಷಣೆ ಮಾಡಲು ರಾಜ್ಯದ ಮೂಲೆ ಮೂಲೆಯಿಂದ ಜನರು ಮುಂದಾಗಿದ್ದಾರೆ. ಇಂದು ಐಎಎಸ್ ತರಬೇತುದಾರ ಹಾಗೂ ಸಮಾಜ ಸೇವಕ ಶಿವಕುಮಾರ ರವರ ತಂಡ ದಾಸನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಕಟ್ಟೆಯನ್ನು ವೀಕ್ಷಣೆ ಮಾಡಿದರು. ಬಳಿಕ ವಾಹಿನಿಯೊಂದಿಗೆ ಮಾತನಾಡಿ, ಕಾಮೇಗೌಡರು ನಿರ್ಮಿಸಿದ ಕಟ್ಟೆಗಳನ್ನು ನೋಡಿ ರಾಷ್ಟ್ರಕವಿ ಕುವೆಂಪು ಹೇಳಿದ ಊಳುವ ಯೋಗಿ ನೋಡಾಲ್ಲಿ ಹಾಡು ನೆನಪಿಗೆ ಬರುತ್ತದೆ. ಒಬ್ಬ ರೈತ ಏನ್ನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಕಾಮೇಗೌಡರು ಸಾಕ್ಷಿಯಾಗಿದ್ದಾರೆ ಎಂದರು.ಇನ್ನೂ ಈ ಸಂದರ್ಭದಲ್ಲಿ ಸಿಕ್ರೇಶ್, ಅನಿಲ್ ಕುಮಾರ್, ವಿನೋದ ಕುಮಾರ, ಅಶೋಕಕುಮಾರ್ ಸೇರಿದಂತೆ ಮತ್ತಿತ್ತರರು ಕೆರೆಯನ್ನು ವೀಕ್ಷಣೆ ಮಾಢಿ ಕಾಮೇಗೌಡರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ವರದಿ : ಎ.ಎನ್ .ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment