ಹಾಲು ಕೊಳ್ಳುವವರಿಗೆ ಹಾಗೂ ಮಾರಾಟಗಾರರಿಗೆ ಮಾಸ್ಕ್ ವಿತರಣೆ..

ಮಳವಳ್ಳಿ: ಭಾರತೀಯ ಜನತಾ ಪಾರ್ಟಿ ಹಾಗೂ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ವತಿಯಿಂದ ಹಾಲು ಮಾರಾಟಗಾರರು ಹಾಗೂ ಕೊಳ್ಳುವವರಿಗೆ ಮಾಸ್ಕ್ ವಿತರಣಾ ಕಾರ್ಯಕ್ರಮ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಸಿದ್ದಾರ್ಥನಗರದಲ್ಲಿ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಯಮದೂರುಸಿದ್ದರಾಜು ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ಬಳಿಕ ಮಾತನಾಡಿದ ಡಾ.ಯಮದೂರುಸಿದ್ದರಾಜು ರವರು ವಿಶ್ವ ವ್ಯಾಪ್ತಿಯಲ್ಲಿ ಕೋರಾನಾ ಹೆಚ್ಚಾಗುತ್ತಿದ್ದು, ದೇಶ ಹಾಗೂ ರಾಜ್ಯ ದಿನದಿನೇ ಹೆಚ್ಚಾಗುತ್ತಿದೆ.ದೇಶದಲ್ಲಿ ಪ್ರಧಾನಿ ಮೋದಿಜೀ ಹಾಗೂ ರಾಜ್ಯದಲ್ಲಿಮುಖ್ಯಮಂತ್ರಿ ಯಡಿಯೂರಪ್ಪ ರವರು ಕೋವಿಡ್ 19 ನಿಯಂತ್ರಣ ಮಾಡಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಅದಕ್ಕಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದರು. ಮಳವಳ್ಳಿ ತಾಲ್ಲೂಕಿನಲ್ಲೂ ಕೋವಿಡ್ 19 ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರೂ.

ವರದಿ: ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment