ಜೆ.ಡಿಎಸ್ ಶಾಸಕನಿಗೆ ಕೊರೊನಾ ಸೋಂಕು ದೃಡ…!

ನಾಗಮಂಗಲ: ನಾಗಮಂಗಲ ವಿಧಾನಸಭಾ ಕ್ಷೇತ್ರದ JDS ಶಾಸಕ ಸುರೇಶ್ ಗೌಡರಿಗೆ ಕೆಲದಿನಗಳಿಂದ ತಲೆನೋವು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಸ್ವಯಂಪ್ರೇರಿತರಾಗಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಇಂದು ರಿಪೋರ್ಟ್ ಬಂದಿದ್ದು ರಿಪೋರ್ಟ್ ನಲ್ಲಿ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಇನ್ನೂ ಶಾಸಕರ ಕಾರು ಚಾಲಕನಿಗೂ ಸೋಂಕು ಧೃಡಪಟ್ಟಿದೆ. ಶಾಸಕ ಮದುವೆ, ಗೃಹ ಪ್ರವೇಶದಲ್ಲೂ ಕೂಡ ಭಾಗಿಯಾಗಿದ್ದು, ಇಬ್ಬರು ಜೆಡಿಎಸ್ ಮುಖಂಡರ ಮನೆಗೆ ಭೇಟಿ ನೀಡಿ ಸಭೆಯನ್ನೂ ನಡೆಸಿದ್ದರು. ಗುರುವಾರ ಮದ್ದೂರು ತಾಲೂಕಿನ ಪ್ರವಾಸಿ ಮಂದಿರಲ್ಲಿ ಬಗರ್ ಹುಕಂ ಸಮಿತಿ ಸಭೆ ನಡೆಸಿದ್ದು ಸಭೆಯಲ್ಲಿ ಮದ್ದೂರು ತಹಸೀಲ್ದಾರ್ ಸೇರಿದಂತೆ ಮುಂತಾದ ಅಧಿಕಾರಿಗಳು ಪಾಲ್ಗೊಂಡಿದ್ದರು.ಶಾಸಕ ಸುರೇಶ್ ಗೌಡರಿಗೆ ಪಾಸಿಟೀವ್ ಬಂದ ಕಾರಣ ಶಾಸಕರ ಸಂಪರ್ಕದಲ್ಲಿದ್ದಂತಹ ಅಧಿಕಾರಿಗಳ ಎದೆಯಲ್ಲಿ ಈಗಾ ಢವ ಢವ ಶುರುವಾಗಿದೆ.

Please follow and like us:

Related posts

Leave a Comment