ದೇವರ ದರ್ಶನಕ್ಕೆ ಮುಗಿಬಿದ್ದ ಜನ..ಸೋಂಕು ಹರಡುವ ಭೀತಿಯಲ್ಲಿ ಜನಗಳನ್ನು ವಾಪಾಸ್ಸ್ ಕಳುಹಿಸಿದ ಆಡಳಿತ ಮಂಡಳಿ..!

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ಉಚ್ಚoಗೇಮ್ಮನ ದೇವಸ್ಥಾನವನ್ನು ಸರ್ಕಾರದ ಆದೇಶದಂತೆ ಕೋವಿಡ್-19 ನಿಂದಾಗಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಲಾಕ್ ಡೌನ್ ತರವಿನ ನಂತರ ಇಂದು ಧಾರ್ಮಿಕ ಪ್ರಸಿದ್ಧ ಉಚ್ಚoಗಿ ದುರ್ಗದಲ್ಲಿ ನೂಲು ಹುಣ್ಣಿಮೆ ಪ್ರಯುಕ್ತ ಉಚ್ಚoಗೇಮ್ಮನ ದೇವಸ್ಥಾನವನ್ನು ಓಪನ್ ಮಾಡಿದ್ದು, ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡಬಹುದು ಎಂದು ಎಚ್ಚೇತ್ತ ತಾಲ್ಲೂಕು ಆಡಳಿತ ಮಂಡಳಿ ಮತ್ತೆ ಇಂದಿನಿಂದ ದೇವರ ದರ್ಶನವನ್ನು ನಿಷೇಧ ಮಾಡಿದ್ದು, ಗ್ರಾಮದಲ್ಲಿರುವ ಹಾಲಮ್ಮ, ಪಾದಗಟ್ಟೆ, ಗುಡ್ಡದ ಮೇಲಿನ ಉಚ್ಚoಗೇಮ್ಮ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಸಿಪಿಐ ಕುಮಾರ್ ಹಾಗೂ ಅರಸೀಕೆರೆ ಸಬ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್, ಮುಜುರಾಯಿ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲಿ ಭಕ್ತರು ಗುಂಪು ಸೇರದಂತೆ ಭಕ್ತರನ್ನು ತಡೆದು ವಾಪಸ್ಸ್ ಕಳುಹಿಸುತ್ತಿದ್ದು, ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡದ ಕಾರಣ ಗ್ರಾಮದ ಹೊರಗೆ ಅಲ್ಲಲ್ಲಿ ಪೂಜೆಯನ್ನು ಮಾಡಿ ತಮ್ಮ ಊರುಗಳಿಗೆ ಭಕ್ತರು ತೆರಳಿದರು.

ವರದಿ: ಮೆಹೆಬೂಬ್ ಸಬ್ ಎಕ್ಸ್ ಪ್ರೆಸ್ ಟಿವಿ ಹರಪನಹಳ್ಳಿ

Please follow and like us:

Related posts

Leave a Comment