ಮಳವಳ್ಳಿ ಪಟ್ಟಣದಲ್ಲಿ ದ್ವಿಶತಕ ಬಾರಿಸುತ್ತಿರುವ ಕೊರೊನಾ ಸೋಂಕು..ಒಟ್ಟು205 ಮಂದಿಗೆ ಸೋಂಕು ದೃಡ..!

ಮಳವಳ್ಳಿ: ಮಳವಳ್ಳಿಯಲ್ಲಿ ಕೊರೊನಾ ಸೋಂಕು ದ್ವಿಶತಕ ಬಾರಿಸಿದ್ದು, ತಾಲ್ಲೂಕಿನ ಕಿರುಗಾವಲಿನಲ್ಲಿ ಐದು ಮಂದಿ ಪೊಲೀಸರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಗಂಗಾಮತ ಬೀದಿಯಲ್ಲಿ 5 ಮಂದಿಗೆ,ಸಿದ್ದಾರ್ಥನಗರದಲ್ಲಿ 1 ಮಂದಿಗೆ, ಎನ್ ಇ.ಎಸ್ ಬಡಾವಣೆಯಲ್ಲಿ 1 ಮಂದಿಗೆ,ಮಲ್ಲಿಕಾತ್ಯನಹಳ್ಳಿ ಗ್ರಾಮದಲ್ಲಿ 1 ಮಂದಿ, ಕೋಡಿಪುರ ಗ್ರಾಮದಲ್ಲಿ 1, ಹಲಗೂರು ಗ್ರಾಮದಲ್ಲಿ 2 ಮಂದಿಗೆ,ಕಿರುಗಾವಲು ಪೊಲೀಸ್ ಠಾಣೆಯ 5 ಮಂದಿಗೆ ಸೇರಿದಂತೆ ಒಟ್ಟು 20 ಮಂದಿಗೆ ಸೋಂಕು ಪತ್ತೆಯಾಗಿದೆ.ಮಳವಳ್ಳಿ ತಾಲ್ಲೂಕಿನಲ್ಲಿ ಇದುವರೆಗೂ 205 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು 100 ಮಂದಿ ಗುಣ ಮುಖರಾಗಿದ್ದಾರೆ.ಆರೋಗ್ಯ ಇಲಾಖೆ ಸೋಕಿತರಿಂದ ಪ್ರೈಮರಿ ಹಾಗೂ ಸೆಕಂಡರಿ ಕಾಂಟ್ಯಾಕ್ಟ್ ಮಾಹಿತಿ ಸಂಗ್ರಹಿಸುತ್ತಿದ್ದು,ತಾಲ್ಲೂಕು ಆಡಳಿತ ಸೋಂಕಿತರ ಸ್ಥಳಗಳನ್ನು ಸೀಲ್ ಡೌನ್ ಮಾಡಲು ಚಿಂತನೆ ನಡೆಸುತ್ತಿದೆ.

ವರದಿ-ಸಿ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment