ಸಿದ್ದರಾಮಯ್ಯನವರು ಶೀಘ್ರ ಗುಣಮುಖರಾಗಲೇಂದು ಅಭಿಮಾನಿಗಳು ಹಾಗೂ ಕ್ಷೇತ್ರದ ಮುಖಂಡರಿಂದ ಬನಶಂಕರಿ ದೇವಿಗೆ ವಿಶೇಷ ಪೂಜೆ..!

ಬಾಗಲಕೋಟೆ: ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕೋರೊನಾ ಸೋಂಕು ದೃಡಪಟ್ಟ ಹಿನ್ನೆಲೆ ಅವರ ಬಾದಾಮಿ ಕ್ಷೆತ್ರದ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯರು ಶೀಘ್ರ ಗುಣಮುಖರಾಗಲ್ಲಿ ಎಂದು ಬಾದಾಮಿಯ ಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ತಾಯಿ ಬನಶಂಕರಿ ದೇವಿಯಲ್ಲಿ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪನವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸಿದ್ದು, ಈ ಸಂದರ್ಭದಲ್ಲಿ ಮುಖಂಡರಾದ ಹೊಳಬಸು ಶೆಟ್ಟರ್, ಪಿ ಆರ್ ಗೌಡರ, ಮಲ್ಲಣ್ಣ ಯಲಿಗಾರ, ರಾಜು ಚಿಮ್ಮನಕಟ್ಟಿ, ಮಹೇಶ ಹೊಸಗೌಡರ, ರಾಜಮಹ್ಮದ ಭಗವಾನ್, ಎಮ್.ಎಚ್.ಚಲವಾದಿ, ರೇವಣಸಿದ್ದಪ್ಪ ನೋಟಗಾರ, ಹನಮಂತ ಅಪ್ಪಣ್ಣವರ,ಶಿವು ಮಣ್ಣೂರ ನಾಗಪ್ಪ ಅಡಪಟ್ಟಿ, ಶ್ರೀ ಕಾಂತಗೌಡ ಗೌಡರ, ವೆಂಕಣ್ಣ ಹೋರಕೇರಿ, ಶೊರಪ್ಪ ಕೊಪನ್ನವರ , ಕೆ.ಬಿ.ಗೌಡರ ,ವಾಸು ಬಾವಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment