ಶಾರ್ಟ್ ಸರ್ಕ್ಯೂಟ್ ನಿಂದ ಪಾನ್ ಅಂಗಡಿ ಸುಟ್ಟು ಭಸ್ಮ..!

ಕಲಬುರಗಿ: ವಿದ್ಯುತ್ ಶ್ಯಾಟ್೯ ಸಕ್ಯೂ೯ಟ್ ನಿಂದಾಗಿ ಪಾನ್ ಶಾಪ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಕಲಬುರುಗಿ ಜಿಲ್ಲೆಯ ಅಫಜಲಪೂರದಲ್ಲಿ ನಡೆದಿದೆ.ಮಲ್ಲಿಕಾರ್ಜುನ ಶಿವಪ್ಪ ಶಿವಗೊಂಡ ಎಂಬುವವರಿಗೆ ಸೇರಿದ ಪಾನ್ ಅಂಗಡಿಯಲ್ಲಿ ಸುಮಾರು 3ಲಕ್ಷದಷ್ಟು ನಷ್ಟವಾಗಿದ್ದು, ಫ್ರಿಡ್ಜ್, ಕೂಲ್ಡ್ರಿಂಕ್ಸ್ ಇನ್ಯೂವೇಟರ್, ಬ್ಯಾಟರಿ,ಇನ್ನಿತರ ಬೇಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ಜೆ ಎಂ ಕೋರಬು ಮತ್ತು ಜೆ ಎಂ ಕೋರಬು ಫೌಂಡೇಶನ್ ವತಿಯಿಂದ ತಕ್ಷಣ 10ಸಾವಿರ ರೂಪಾಯಿ ನಗದು ಧನ ಸಹಾಯ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಫೌಂಡೇಶನ್ ಅಧ್ಯಕ್ಷ ಶಿವಪುತ್ರ ಜಿಡ್ಡಗಿ ಮಾತನಾಡಿ ವಿದ್ಯುತ್ ಅವಗಡದಿಂದ ಅಂಗಡಿ ಸುಟ್ಟುಕೊಂಡು ಬೀದಿಪಾಲಾದ ಕುಟುಂಬಕ್ಕೆ ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಸಂಸ್ಥಾಪಕ ಜೆ.ಎಂ.ಕೊರಬು, ಅಧ್ಯಕ್ಷ ಶಿವುಪುತ್ರ ಜಿಡ್ಡಗಿ,ಮುಖಂಡರಾದ ಚಂದ್ರಾಮ ಹಾವಳಗಿ,ಸೂರ್ಯಕಾಂತ ರ್ಯಾಖಾ,ಪಂಡಿತ ನಾವಿ,ಅಣ್ಣಾರಾವ ಶಿವಗೊಂಡ,ಬಸವರಾಜ ಇಂಚೂರ ಸೇರಿದಂತೆ ಇತರರು ಇದ್ದರು.

ವರದಿ:ಈರಣ್ಣ ಎಂ.ವಗ್ಗೆ ಅಫಜಲಪೂರ

Please follow and like us:

Related posts

Leave a Comment