ಶಿರಾ ಶಾಸಕ ಬಿ.ಸತ್ಯನಾರಾಯಣ್ ರವರ ಅಂತಿಮ ದರ್ಶನ..

ಶಿರಾ: ಬೆಂಗಳೂರಿನಲ್ಲಿ ನಿಧನರಾದ ಮಾಜಿ ಸಚಿವ ಹಾಲಿ ಶಾಸಕ ಬಿ.ಸತ್ಯನಾರಾಯಣ್,2018 ರ ಚುನಾವಣೆಯಲ್ಲಿ ಶಾಸಕರಾಗಿ,ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅದ್ಯಕ್ಷರಾಗಿ ಕೊರೋನ ಲಾಕ್ ಡೌನ್ ಸಮಯದಲ್ಲಿ ಅಧಿಕಾರಿ ವರ್ಗದವರಿಗೆ ಕ್ಷೇತ್ರದಲ್ಲಿ ಮಾರ್ಗದರ್ಶಕರಾಗಿ,ಉತ್ತಮ ಸೇವೆ ಸಲ್ಲಿಸಿದರು. ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಇದ್ದರು ಸಹ ಕ್ಷೇತ್ರಗಳಿಗೆ ಭೇಟಿ ನೀಡಿ ಕ್ಷೇತ್ರದ ಆಗೂ-ಹೋಗುಗಳನ್ನು ವಿಚಾರಿಸುತ್ತಿದ್ದರು.ಜನಸೇವಕರಾಗಿದ್ದಂತಹ ಸತ್ಯನಾರಾಯಣ ರವರ ಸಾವು ಇಡೀ ಶೀರಾ ತಾಲ್ಲೂಕಿಗೆ ಬರಸಿಡಿಲು ಬಡಿದಂತಾಗಿದೆ.ಇವರ ಅಂತಿಮ ದರ್ಶನವನ್ನು ಪಡೆಯಲು ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗಿತ್ತು.ನಿಧನದ ವಿಷಯ ತಿಳಿಯುತ್ತಿದ್ದಂತೆ ಗಣ್ಯಾತೀಗಣ್ಯರು ,ಕಾರ್ಯಕರ್ತರು,ಅಭಿಮಾನಿಗಳು ಸತ್ಯನಾರಾಯಣ ರವರ ಅಂತಿಮ ದರ್ಶನ ಪಡೆದರು.ಜನನಾಯಕ, ಆತ್ಮೀಯ ಸ್ನೇಹಿತ, ಕಾರ್ಯಕರ್ತರ ಪಾಲಿನ ಅಣ್ಣನನ್ನು ನೋಡಲು ಅಪಾರ ಸಂಖ್ಯೆಯ ಜನರು ಧಾವಿಸುತ್ತಿದ್ದು, ನಾಯಕನ ಪಾರ್ಥಿಕ ಶರೀರದ ಬಳಿ ನಿಂತು ಕಂಬನಿ ಮಿಡಿಯುತ್ತಿದ್ದರು. ಕೆಲವರು ತನ್ನ ಒಡನಾಡಿಯನ್ನು ಕಳೆದುಕೊಂಡ ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು.ನಗರಸಭೆ ಮಾಜಿ ಅಧ್ಯಕ್ಷ ಸದಸ್ಯರು ಪ.ನಾ.ಹಳ್ಳಿಯ ಶ್ರೀ ನಂಜಾವದೂತ ಸ್ವಾಮೀಜಿ,ಎಲೆರಾಪುರದ ಹನುಮಂತ ನಾಥ್ ಸ್ವಾಮಿ.ಜೆಡಿಎಸ್ ಮುಖಂಡ ಮತ್ತಿತರರು. ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡರು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್,ಜಿಲ್ಲೆಯ ವಿವಿಧ ಶಾಸಕರುಗಳು, ಸಂಸದರು ಅಂತಿಮ ದರ್ಶನ ಪಡೆದರು.ಸಾರ್ವಜನಿಕರು ಹಾಗೂ ಆಪ್ತರು ಬಂಧುಬಾಂಧವರ ದರ್ಶನದ ಬಳಿಕ ಮೃತದೇಹವನ್ನು ಸ್ವಗ್ರಾಮ ಬೂವನಹಳ್ಳಿಯ ತೋಟದ ಮನೆಯಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕ ಕಾರ್ಯಗಳನ್ನು ನಡೆಸಲಾಯಿತು.

ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ ..

Please follow and like us:

Related posts

Leave a Comment