ಮೈಕ್ರೋ ಫೈನಾನ್ಸ್ ಸಾಲ ಮನ್ನ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ..!

ಮಳವಳ್ಳಿ: ದಲಿತ ಹಕ್ಕುಗಳ ಸಮಿತಿ ವತಿಯಿಂದ ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಲು ಒತ್ತಾಯಿಸಿ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಮಳವಳ್ಳಿ ತಾಲ್ಲೂಕು ದಲಿತ ಹಕ್ಕುಗಳ ಸಮಿತಿ, ಕರ್ನಾಟಕ ತಾಲ್ಲೂಕು ಸಂಚಾಲಕ ಎಂ.ಡಿ ಶಂಕರ್ ನೇತೃತ್ವದಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಘೋಷಣೆ ಕೂಗಿದರು. ಇನ್ನೂ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಆರ್ .ಕೃಷ್ಣ ಮಾತನಾಡಿ ವಿಶ್ವದಲ್ಲಿ ಕೊರೋನಾ ಆರ್ಭಟ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಭಾರತ ದೇಶದಲ್ಲಿ ನಾಗಲೋಟದ ಹಾದಿಯಲ್ಲಿ ಕೊರೋನಾ ಜಿಗಿಯುತ್ತಿದೆ.ಇಂತಹ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಸಾಲ ವಸೂಲಿ ಮಾಡಲು ಹೊರಡಿದೆ. ಇದನ್ನು ದಲಿತ ಹಕ್ಕುಗಳ ಸಮಿತಿ ಖಂಡಿಸುತ್ತದೆ ಎಂದರು. ಕೊರೋನಾ ಪರಿಸ್ಥೀತಿ ಎಲ್ಲಿಯವರೆಗೂ ಮುಂದುವರೆಯುತ್ತದೆಯೋ ಅಲ್ಲಿಯರೆಗೆ ಮೈಕ್ರೋ ಫೈನಾನ್ಸ್ ಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಫೈನಾನ್ಸ್ ಸಂಸ್ಥೆಗಳು ಎಲ್ಲಾ ಪಲಾನುಭವಿಗಳಿಗೆ 10 ಸಾವಿರ ರೂ ಕೋರಾನಾ ಪರಿಹಾರವಾಗಿ ನೀಡಬೇಕು,ಜೊತೆಗೆ ಹೊಸ ಸಾಲ ನೀಡಬೇಕು, ಹಾಗೂ ಕನಿಷ್ಟ 1ಲಕ್ಷ ರೂಗಳ ಸಾಲವಾಗಿ ಕಡಿಮೆ ಬಡ್ಡಿಯಲ್ಲಿ ನೀಡಬೇಕು. ಸಾಲ ವಸೂಲಿ ಸಂದರ್ಭದಲ್ಲಿನ ದೌರ್ಜನ್ಯವನ್ನು ತಡೆಗಟ್ಟಬೇಕು,ಇತರೆ ಸೇರಿದಂತೆ ಬೇಡಿಕೆಗಳುಳ್ಳ ಮನವಿಯನ್ನು ತಹಸೀಲ್ದಾರ್ ಚಂದ್ರಮೌಳಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಆರ್, ಕೃಷ್ಣ, ತಾಲ್ಲೂಕು ಸಂಚಾಲಕ ಎಂ. ಡಿ ಶಂಕರ್, ಕೂಲಿಕಾರರ ಸಂಘದ ಬಸವರಾಜು, ಮಹದೇವಯ್ಯ ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment