ಸಕಲೇಶಪುರದ ಸುತ್ತಮುತ್ತ ಭಾರಿ ಮಳೆ…ನದಿಯಲ್ಲಿ ಮುಳುಗಿದ ದೇವಸ್ಥಾನ


ಹಾಸನ : ಮಲೆನಾಡು ಸಕಲೇಶಪುರದಲ್ಲಿ ಭಾರಿ ಮಳೆಯಾಗುತ್ತಿದ್ದು, ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯದ ಸುತ್ತಮುತ್ತ ಜಲಾವೃತಗೊಂಡಿದ್ದು, ಸಕಲೇಶಪುರ ಪಟ್ಟಣದ ಆಜ಼ಾದ್ ನಗರದಲ್ಲಿರುವ ಮನೆ ಹಾಗು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.ಹೇಮಾವತಿ ಜಲಾಶಯದ ಇಂದಿನ ಮಟ್ಟ
ಜಲಾಶಯದ ಗರಿಷ್ಠ ಮಟ್ಟ 2,922 ಅಡಿ,ಇಂದಿನ ನೀರಿನ ಮಟ್ಟ 2911.64 ಅಡಿ
ಇಂದಿನ ಒಳಹರಿವು 47,320 ಕ್ಯೂಸೆಕ್,ಇಂದಿನ ಹೊರಹರಿವು 1400 ಕ್ಯೂಸೆಕ್
ಒಟ್ಟಿನಲ್ಲಿ ಇಷ್ಟುದಿನ ಕೊರೊನಾ ಜೊತೆ ಜೀವ ಉಳಿಸಿಕೊಳ್ಳಲು ಹೊಡೆದಾಡುತ್ತಿದ್ದ ಜನ ಈಗ ಮಳೆಯಿಂದ ತಮ್ಮ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕಿದೆ
ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment